ಕೇರಳದ ಕನ್ನಡಿಗ ಶಾಸಕ ಇನ್ನಿಲ್ಲ

ಕಾಸರಗೋಡು: 

         ಕೇರಳ ವಿಧಾನಸಭೆಯ ಕನ್ನಡದ ಕಟ್ಟಾಳು ಮಂಜೇಶ್ವರ ಶಾಸಕ ಪಿ.ಬಿ. ಅಬ್ದುಲ್ ರಜಾಕ್(63) ನಿಧನರಾಗಿದ್ದಾರೆ.ಅಬ್ದುಲ್ ರಜಾಕ್ ಅವರು ಅನೇಕ ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದಗೇ ಶನಿವಾರ ನಸುಕಿನ ಜಾವ ಮೃತಪಟ್ಟಿದ್ದಾರೆ.

            ಅಬ್ದುಲ್ ರಜಾಕ್ 2016ರಲ್ಲಿ ಎರಡನೇ ಬಾರಿಗೆ ಕೇರಳ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕನ್ನಡ ತನವನ್ನು ಎತ್ತಿ ಹಿಡಿದಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link