ಬೆಂಗಳೂರು :
ಇಂದು ದೇಶಾದ್ಯಂತ ಬಿಡುಗಡೆಯಾಗಿ ಭರ್ಜರಿ ಓಪನಿಂಗ್ ಪಡೆದಿರುವ ರಾಕಿಂಗ್ ಸ್ಟಾರ್ ನಟನೆಯ ಕೆಜಿಎಫ್ ಚಿತ್ರವನ್ನು ವ್ಯಕ್ತಿಯೊಬ್ಬ ಫೇಸ್ ಬೈಕ್ ಲೈವ್ ನಲ್ಲಿ ಚಿತ್ರೀಕರಣ ಮಾಡಿ ಹರಿಬಿಟ್ಟಿರುವುದು ಬೆಳಕಿಗೆ ಬಂದಿದೆ.
ಹೌದು, ಅನಿಲ್ ಚಿನ್ನು ಎನ್ನುವ ವ್ಯಕ್ತಿಯೊಬ್ಬ ಸಿನಿಮಾ ಶುರುವಾಗುತ್ತಿದ್ದಂತೆ ಫೇಸ್ ಬುಕ್ ಲೈವ್ ಗೆ ಬಂದು ಸತತ 40 ನಿಮಿಷಗಳ ಕಾಲ ಸಿನಿಮಾವನ್ನು ಲೈವ್ ಆಗಿ ಹರಿಬಿಟ್ಟಿದ್ದಾನೆ
ಅನಿಲ್ ಚಿನ್ನು ಎನ್ನುವ ವ್ಯಕ್ತಿ ಮೂಲತಹ ಮೈಸೂರಿನವರಾಗಿದ್ದು, ಬೆಂಗಳೂರಿನ ಹೋಟೆಲ್ ನಲ್ಲಿ ಉದ್ಯೋಗಿ ಆಗಿದ್ದಾರೆ. ಈತನ ಫೇಸ್ ಬುಕ್ ಲೈವ್ ನೋಡಿದ ಯಶ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
