ಬೆಂಗಳೂರು:
ಕೆಜಿಎಫ್ ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಸಿಟಿ ಸಿವಿಲ್ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ದೂರುದಾರ ಹಿಂಪಡೆದಿದ್ದು, ಇದರಿಂದಾಗಿ ಚಿತ್ರ ತಂಡಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಕೆಜಿಎಫ್ ಸಿನಿಮಾ ಕೋಲಾರದ ಕುಖ್ಯಾತ ರೌಡಿ ತಂಗಂ ಜೀವನ್ನಾಧರಿಸಿದ್ದು, ಇದು ತನ್ನ ಕಥೆ ಎಂಬುದಾಗಿ ಆರೋಪಿಸಿ ಕೆಜಿಎಫ್ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡುವಂತೆ ಕೋರಿ ವೆಂಕಟೇಶ್ ಅವರು ಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ 10ನೇ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಂ.ಪಂಚಾಕ್ಷರಿ ಅವರು ನಿನ್ನೆ ತಡೆಯಾಜ್ಞೆ ಕೋರಿ ಇವತ್ತು ಯಾಕೆ ವಾಪಸ್ ಪಡೆಯುತ್ತಿದ್ದೀರಿ? ಚಿತ್ರ ತಂಡದ ಜೊತೆ ಮಾತನಾಡಿದ್ದೀರಾ ಎಂದು ಪ್ರಶ್ನಿಸಿದ್ದರು. ಅದಕ್ಕೆ ವೆಂಕಟೇಶ್ ಅವರು ಹೌದು ಮಾತುಕತೆ ನಡೆಸಿದ್ದೇನೆ, ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದಾಗ..ನ್ಯಾಯಾಧೀಶರು ಸಮ್ಮತಿ ಸೂಚಿಸಿರುವುದಾಗಿ ವರದಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
