ಬಳ್ಳಾರಿ : ಆಸ್ತಿ ವಿಚಾರಕ್ಕೆ ಮಾವನನ್ನೇ ಕೊಚ್ಚಿ ಕೊಂದ ಅಳಿಯ!!

ಬಳ್ಳಾರಿ:

     ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಬಂಡ್ರಾಳು ಗ್ರಾಮದಲ್ಲಿ ಆಸ್ತಿ ವಿವಾದದ ಹಿನ್ನಲೆಯಲ್ಲಿ ಅಳಿಯನೇ ಮಾವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

       48 ವರ್ಷದ ವಿರೂಪಾಕ್ಷಗೌಡ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿಚಾರವಾಗಿ ವಿರುಪಾಕ್ಷಗೌಡ ಮತ್ತು ಆತನ ಸಹೋದರಿ ನಡುವೆ ಜಗಳ ಆಗುತ್ತಿತ್ತು.

       ಆ ಒಳಜಗಳ ನಿನ್ನೆ ದಿನ ತಾರಕಕ್ಕೇರಿದ್ದು, ವಿರೂಪಾಕ್ಷಗೌಡ ಸಹೋದರಿಯ ಮಗನೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಮಾವನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿಕೊಲೆ ಮಾಡಿ ನಂತರ ಸಿರುಗುಪ್ಪ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.

        ಸಿರಗುಪ್ಪ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap