ತುಮಕೂರು:
ಇನ್ನೂ ಕೆಲವು ದೋಸ್ತಿ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಬಾಂಬ್ ಸಿಡಿಸಿದ್ದಾರೆ.
ಇಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯನ್ನು ಸಮರ್ಥಿಸಿಕೊಳ್ಳುವ ನಮ್ಮವರಿಗೆ ಬುದ್ಧಿ ಇಲ್ಲ. ಮೈತ್ರಿ ಸರ್ಕಾರದ ಇನ್ನೂ ಕೆಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ. ಹೆಸರು ಹೇಳಿದರೆ ಅವರು ಅಲರ್ಟ್ ಆಗುತ್ತಾರೆ. ಹಾಗಾಗಿ ಅವರ ಹೆಸರು ಹೇಳುವುದಿಲ್ಲ ಎಂದು ಸ್ಫೋಟಕ ಸುದ್ದಿ ನೀಡಿದ್ದಾರೆ.
ಸರ್ಕಾರ ಉಳಿಬಾರದು. ಸರ್ಕಾರ ಉರುಳಬೇಕು ಎನ್ನುವುದು ನನ್ನ ಅಭಿಪ್ರಾಯ. ಮೊದಲೇ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇ ನಮ್ಮ ಮೊದಲ ತಪ್ಪು, ಮೈತ್ರಿ ಮಾಡಿಕೊಂಡು ನಾವು ನೆಲಕಚ್ಚಿದ್ದೇವೆ. ಈಗ ಸರ್ಕಾರ ಬೀಳಬೇಕು ತಪ್ಪು ಅರಿವಾಗಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
