ಕೊಡಗು :
ಮನೆಯ ಮೇಲೆ ಗುಡ್ಡ ಕುಸಿದು ಒಂದೇ ಕುಟುಂಬದ 5 ಮಂದಿ ಸಾವನ್ನಪ್ಪಿರುವ ಘಟನೆ ಭಾಗಮಂಡಲದ ಸಮೀಪ ಇರುವ ಕೊರಂಗಾಲ ಗ್ರಾಮದಲ್ಲಿ ನಡೆದಿದೆ.
ಭೂ ಕುಸಿತಕ್ಕೆ ಸಿಲುಕಿ ಮೃತರಾದವರ ಪೈಕಿ ನಾಲ್ವರ ಮೃತದೇಹ ಪತ್ತೆಯಾಗಿದೆ. ಯಶವಂತ ಅತ್ತೇಡಿ, ಬಾಲಕೃಷ್ಣ ಬೋಳನ, ಯಮುನಾ ಬೋಳನಾ ಹಾಗೂ ಉದಯ ಕಾಳನ ಎಂಬವರ ಗುರುತು ಪತ್ತೆಯಾಗಿದೆ.
ಈ ಕೋರಂಗಾಲ ಗ್ರಾಮ ಭಾಗಮಂಡಲದ ತ್ರಿವೇಣಿ ಸಂಗಮ ನಂತರ ಇದ್ದು ಈ ಪ್ರದೇಶ ಸಂಪೂರ್ಣ ಜಲಾವೃತವಾದ ಕಾರಣ ರಕ್ಷಣಾ ಕಾರ್ಯ ಮಾಡುವುದು ಕಷ್ಟವಾಗಿದೆ. ಪೊಲೀಸರು ಸ್ಥಳ ತಲುಪಿದ್ದು, ಕಾರ್ಯಚರಣೆ ಮುಂದವರೆಸಿದ್ದಾರೆ.
ಕೇಂದ್ರ ಸಚಿವ ಸದಾನಂದಗೌಡ ಅವರು ಭೂಕುಸಿತದಲ್ಲಿ ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ