ಕೊರಟಗೆರೆ : ಕಾರು – ಬೈಕ್ ಮುಖಾಮುಖಿ ; ಬೈಕ್ ಸವಾರ ಸಾವು!!

ಕೊರಟಗೆರೆ:

     ಕಾರು ಹಾಗೂ ದ್ವಿಚಕ್ರವಾಹನಗಳ ಮದ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ದ್ವಿಚಕ್ರವಾಹನ ಸವಾರನಿಗೆ ತೀವ್ರ ಪೆಟ್ಟಾಗಿ ಅತೀವ ರಕ್ತಸ್ರವದಿಂದ ಸ್ಥಳದಲ್ಲಿಯೇ ಕೊನೆಯುಸಿರೆಳೆದ ಘಟನೆ ಗುರುವಾರ ಮದ್ಯಾಹ್ನ ಕೊರಟಗೆರೆ ಹೊರವಲಯದ ರಿಂಗ್ ರೋಡ್‍ನಲ್ಲಿ ಜರುಗಿದೆ.

      ಕೊರಟಗೆರೆ ಪಟ್ಟಣದ ಹೊರವಲಯ ಮಲ್ಲೇಶಪುರ ಕ್ರಾಸ್ ಬಳಿ ಈ ದುರ್ಘಟನೆ ಜರುಗಿದ್ದು, ಕಾರು ಹಾಗೂ ಬೈಕ್‍ನ ಅಪಘಾತದ ರಭಸಕ್ಕೆ ಸ್ಥಳದಲ್ಲಿಯೇ ಬೈಕ್ ಸವಾರ ಸಾವಿಗೀಡಾಗಿದ್ದು, ಬೈಕ್ ಸವಾರ ಹೊಳವನಹಳ್ಳಿ ಗ್ರಾಮದ ಅಲ್ಲಬಕಾಶ್ ಮಗ ರೋಷನ್ ಎಂದು ತಿಳಿದು ಬಂದಿದೆ.

     ಈ ಸಂಬಂಧ ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ನಧಾಪ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap