ಡಿಸಿಎಂ ಸ್ವಕ್ಷೇತ್ರದಲ್ಲಿ ದಯಾಮರಣಕ್ಕೆ ದಲಿತ ಕುಟುಂಬದಿಂದ ಅರ್ಜಿ!

ಕೊರಟಗೆರೆ:

      ಖಾಸಗಿ ವ್ಯಕ್ತಿ ಮತ್ತು ಪೊಲೀಸ್ ಅಧಿಕಾರಿ ಕಾಟ ತಾಳಲಾರದೆ‌ ದಲಿತ ಕುಟುಂಬವೊಂದು ರಾಜ್ಯಪಾಲರ ಬಳಿ ದಯಾಮರಣ ಕೋರಿರುವ ಘಟನೆ ಡಿಸಿಎಂ ಸ್ವಕ್ಷೇತ್ರ ಕೊರಟಗೆರೆಯಲ್ಲಿ ನಡೆದಿದೆ. 

      ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಜಂಪೇನಹಳ್ಳಿ ಕ್ರಾಸ್ ಬಳಿಯ ಜಮೀನಿನಲ್ಲಿ ವಾಸವಿರುವ ನಾಗರಾಜ್ ಎಂಬುವವರ ದಲಿತ ಕುಟುಂಬವೊಂದಕ್ಕೆ ತಾತನ ಆಸ್ತಿಯ ನಕಲು ಖಾತೆ ಮಾಡಿದ್ದಾರೆ‌ ಎಂದು ಆರೋಪಿಸಿ, ಖಾಸಗಿ ವ್ಯಕ್ತಿ ಎಚ್ ಮಹದೇವ್ ಅಲೀಯಸ್ ಮಾಧು ಹಾಗೂ ಸಬ್ ಇನ್ಸಪೆಕ್ಟರ್ ಮಂಜುನಾಥ್ ತಹಶೀಲ್ದಾರ್ ಶಿವಕುಮಾರ ಎಂಬುವವರು ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.

 

       ಬುಕ್ಕಾಪಟಣ ಸರ್ವೆನಂ 117 ರ 4 ಎಕರೆ ಜಮೀನು ತಮ್ಮ ತಾತನಿಗೆ ಹಕ್ಕು ಪತ್ರ ಮುಖಾಂತರ ಮಂಜೂರಾಗಿದ್ದು, ಇದೀಗ ಮಹದೇವ್ ಹಾಗೂ ವಿಜಯಕೃಷ್ಣ ಎನ್ನುವರು ಸೃಷ್ಟೀಕೃತ ದಾಖಲೆಗಳ ಮೇಲೆ ಖಾತೆ ಬದಲಾಯಿಸಿ ನನ್ನ ಸ್ವಾಧೀನಾನುಭವಕ್ಕೆ ತೊಂದರೆ ಕೊಡುತ್ತಿದ್ದಾರೆ ಎಂದು ನಾಗರಾಜು ಆರೋಪಿಸಿದ್ದಾರೆ. ಮಧುಗಿರಿ ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಕ್ರಯಪತ್ರವನ್ನು ವಜಾಗೊಳಿಸಿದ್ದು, ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆಯಲ್ಲಿದೆ. ಆದರೂ ಇದೀಗ ಜಮೀನನ್ನು ವಿಜಯಕೃಷ್ಣ ಅವರಿಗೆ ಬಿಡಿಸಿಕೊಡಲು ತಹಶೀಲ್ದಾರ್ ಪಿಟಿಸಿಎಲ್ ನಂ.01 ರಂತೆ ಆದೇಶ ಮಾಡಿದೆ ಎಂದು ನಾಗರಾಜ್ ತಿಳಿಸಿದ್ದಾರೆ. 

     ಆದರೆ, ಮಹಾದೇವ್ ಹಾಗು ವಿಜಯಕೃಷ್ಣ ಎಂಬುವವರು ರಾಜಕೀಯ ಹಾಗೂ ಆರ್ಥಿಕವಾಗಿ ಬಲಾಢ್ಯರಾಗಿದ್ದು, ನಾಗರಾಜ್ ಕುಟುಂಬಕ್ಕೆ ಕೊಲೆ ಬೆದರಿಕೆಯನ್ನು ಒಡ್ಡಿರುವುದಲ್ಲದೇ, ಜೆಸಿಬಿ ಮೂಲಕ ಅವರ ಮನೆಯನ್ನು ಕೆಡವಿಸುವುದಾಗಿ ಹಾಗೂ ನಾಗರಾಜ್ ಕುಟುಂಬದ ವಿರುದ್ಧ ರೌಡಿ ಶೀಟರ್ ತೆಗೆಯುತ್ತೇವೆ  ಎಂದು ಬೆದರಿಕೆ ಹಾಕಿದ್ದಾರೆ.

      ಇದರಿಂದ ಮನನೊಂದ ನಾಗರಾಜು ಕುಟುಂಬ ಆಸ್ತಿ ಸಿಗದೆ ಬೀದಿ ಪಾಲಾಗುವ ಭಯದಲ್ಲಿ ದಯಾಮರಣಕ್ಕಾಗಿ ರಾಜ್ಯಪಾಲರ ಮೊರೆಹೋಗಿದೆ. ನೊಂದ ಕುಟುಂಬದವರು ಯಾವ ಕ್ಷಣದಲ್ಲಿ ಏನು ಮಾಡಿಕೋಳ್ಳುತ್ತಾರೆ ಎಂಬುವ ಕುತೂಹಲದಲ್ಲಿ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ. 

 

 

 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap