ಕೊರಟಗೆರೆ : ಇಬ್ಬರು ಕಳ್ಳರ ಸೆರೆ, 14 ಬೈಕ್, 1 ಟ್ರ್ಯಾಕ್ಟರ್ ವಶ!

 ತುಮಕೂರು :

      ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕೊರಟಗೆರೆ ಪೊಲೀಸರಿಂದ ರಾತ್ರಿ ವೇಳೆ ದ್ವಿಚಕ್ರ ವಾಹನ ಹಾಗೂ ಟ್ರ್ಯಾಕ್ಟರ್ ಕಳವು ಮಾಡುತ್ತಿದ್ದ ಇಬ್ಬರು ಅಸಾಮಿಗಳನ್ನು ಬಂಧಿಸಲಾಗಿದೆ.

      ಸೋಮವಾರ ಕೊರಟಗೆರೆ ಟೌನ್ ಹೊಳವನಹಳ್ಳಿ ಬೈಪಾಸ್ ಬಳಿ ಕೊರಟಗೆರೆ ಪೊಲೀಸ್ ಠಾಣೆಯ ಪಿ.ಎಸ್.ಐ. ಮುತ್ತುರಾಜು ಹೆಚ್ ರವರ ನೇತೃತ್ವದ ತಂಡವು ಗಸ್ತು ಮಾಡುತ್ತಿರುವಾಗ್ಗೆ ಅನುಮಾನಸ್ವಾದವಾಗಿ ದ್ವಿಚಕ್ರ ವಾಹನದಲ್ಲಿ ಬಂದ ಅಸಾಮಿಯನ್ನು ತಡೆಯಲು ಪ್ರಯತ್ನಿಸಿದಾಗ ಆಸಾಮಿಯು ವಾಹನವನ್ನು ಬಿಟ್ಟು ಓಡಲು ಪ್ರಯತ್ನಿಸಿದ್ದಾನೆ ಆತನನ್ನು ಹಿಂಬಾಲಿಸಿ ಹಿಡಿದು ಠಾಣೆಗೆ ಕರೆತಂದು ವಿಚಾರಣೆ ಮಾಡಲಾಗಿ, ಆತ ಅಕ್ಕಿರಾಂಪುರ ಗ್ರಾಮದ ನಟರಾಜು ಆರ್.ಎಲ್ (27 ವರ್ಷ) ಎಂದು ಗುರುತಿಸಲಾಗಿದ್ದು, ಈತ ತಿಳಿದು ಬಂದಿದ್ದು, ಈತನು ಕೊರಟಗೆರೆ ಪೊಲೀಸ್ ಠಾಣೆ ಒಳಗೊಂಡಂತೆ ತುಮಕೂರು ಜಿಲ್ಲೆಯ ಕೊರಟಗೆರೆ, ತುಮಕೂರು ನಗರ, ತುಮಕೂರು ಗ್ರಾಮಾಂತರ, ಹೊಸ ಬಡಾವಣೆ, ಜಯನಗರ, ಕ್ಯಾತ್ಸಂದ್ರದ ಪೊಲೀಸ್ ಠಾಣೆಯಲ್ಲಿ ದ್ವಿ ಚಕ್ರ ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನಿಂದ 9 ಲಕ್ಷ ರೂ ಮೌಲ್ಯದ ಒಟ್ಟು 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

       ಮತ್ತೊಂದು ಪ್ರಕರಣದಲ್ಲಿ ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಬಳಿ ಸಿಬ್ಬಂದಿ ವೆಂಕಟೇಶ್ ಹಾಗೂ ಸಿದ್ಧಲಿಂಗ ಪ್ರಸ್ನನ್ ಅವರು ಗಸ್ತು ಮಾಡುತ್ತಿರುವಾಗ್ಗೆ ಕೊರಟಗೆರೆ ಠಾಣೆಯಿಂದ ಕಳವು ಪ್ರಕರಣದಲ್ಲಿ ಬೇಕಾಗಿದ್ದ ಟ್ರ್ಯಾಕ್ಟರ್ ಅನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ವ್ಯಕ್ತಿ ಸೆರೆಯಾಗಿದ್ದು, ಬಂಧಿತನನ್ನುಬ ಬುಕ್ಕಾಪಟ್ಟಣ ಗ್ರಾಮದ ರಾಜಣ್ಣ ಎಂದು ಗುರುತಿಸಲಾಗಿದೆ. ಈತನು ಸದರಿ ಟ್ರಾಕ್ಟರ್‍ಅನ್ನು ಕಳವು ಮಾಡಿ ಶಿರಾ ತಾಲ್ಲೂಕಿನ ಕಂಚಗಾನಹಳ್ಳಿ ತನ್ನ ಸಂಬಂಧಿರಕ ಮನೆಗೆ ಸಾಗಾಣಿಕೆ ಮಾಡುತ್ತಿರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದ್ದು,ಆತನಿಂದ 6 ಲಕ್ಷ ರೂ. ಮೌಲ್ಯದ ಟ್ರ್ಯಾಕ್ಟರ್ ಅನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

      ಸದರಿ ಎರಡು ಪ್ರಕರಣಗಳನ್ನು ಎಎಸ್ಪಿ ಉದೇಶ್ ಡಿವೈಎಸ್ಪಿ ಪ್ರವೀಣ್ ಉಪಾಧೀಕ್ಷಕರು, ಮಧುಗಿರಿ ಉಪವಿಭಾಗ ರವರುಗಳ ಮಾರ್ಗದರ್ಶನದಲ್ಲಿ ಕೊರಟಗೆರೆ ವೃತ್ತ ನಿರೀಕ್ಷಕರಾದ ಎಫ್.ಕೆ ನಧಾಪ್ ರವರ ನಿರ್ದೇಶನದಲ್ಲಿ ಕೊರಟಗೆರೆ ಪೊಲೀಸ್ ಠಾಣಾ ಪಿಎಸ್‍ಐ ಮುತ್ತುರಾಜು ಹೆಚ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ವೆಂಕಟೇಶ್, ಮಂಜುನಾಥ, ಮಲ್ಲಿಕಾರ್ಜುನ, ಸೋಮನಾಥ, ಸಿದ್ದಲಿಂಗಪ್ರಸನ್ನ, ಪ್ರಶಾಂತ್ ರವರುಗಳ ತಂಡ ಪತ್ತೆಮಾಡಿದ್ದು,ಎಸ್ಪಿ ಡಾ.ಕೆ.ವಂಶಿಕೃಷ್ಣ ತಂಡವನ್ನು ಅಭಿನಂದಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap