ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಮುಂದುವರಿಕೆ!!

ಬೆಂಗಳೂರು :

      ಕೆಪಿಸಿಸಿ ಸಾರಥ್ಯ ವಹಿಸಲು ಗುದ್ದಾಟ ಕಚ್ಚಾಟ ಲಾಬಿ ಮುಂದುವರೆದ ಪರಿಣಾಮ ಇದೂವರೆಗೂ ಹೈಕಮಾಂಡ್‍ಗೆ ಅಧ್ಯಕ್ಷರ ಆಯ್ಕೆ ಮಾಡಲು ಸಾಧ್ಯವಾಗಿಲ್ಲ.ಹೀಗಾಗಿ ಎದ್ದಿರುವ ಎಲ್ಲಾ ಗೊಂದಲಗಳಿಗೆ ತೆರೆಬೀಳುವವರೆಗೂ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳದಿರಲು ಎಐಸಿಸಿ ನಿರ್ಧರಿಸಿದೆ.ಹೀಗಾಗಿ ಹೈಕಮಾಂಡ್ ಮುಂದಿನ ಆದೇಶ ಪ್ರಕಟವಾಗುವವರೆಗೂ ದಿನೇಶ್ ಗುಂಡೂರಾವ್ ಅವರನ್ನೇ ಮುಂದುವರೆಸಲು ಪಕ್ಷ ನಿರ್ಧರಿಸಿದೆ .

    ದಿನೇಶ್ ಗುಂಡೂರಾವ್ ಉಪಚುನಾವಣೆ ಸೋಲಿನ ಹೊಣೆಹೊತ್ತು ಅಧ್ಯಕ್ಷಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ದಿನೇಶ್ ಪಕ್ಷದ ಕಾರ್ಯಚಟುವಟಿಕೆಯಲ್ಲಿ ಅಷ್ಟೊಂದು ಸಕ್ರಿಯರಾಗಿರಲಿಲ್ಲ.ಅಲ್ಲದೇ ರಾಜೀನಾಮೆ ಅಂಗೀಕಾರವಾಗಿದೆಯೇ ಇಲ್ಲವೇ ಎಂಬುದನ್ನೂ ಸಹ ಎಐಸಿಸಿ ಸ್ಪಷ್ಟಪಡಿಸಿರಲಿಲ್ಲ.ಹೀಗಾಗಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ.

    ಹೈಕಮಾಂಡ್ ಸೂಚನೆ ನೀಡಿದ್ದರಿಂದ ಪಕ್ಷ ಚಟುವಟಿಕೆಯಲ್ಲಿ ದಿನೇಶ್ ಗುಂಡೂರಾವ್ ಸಕ್ರಿಯರಾಗಿ ಕೆಪಿಸಿಸಿ ಕಚೇರಿಯಲ್ಲಿ ಬೆಂಗಳೂರು ಜಿಲ್ಲಾಧ್ಯಕ್ಷರು ಹಾಗು ಪ್ರಮುಖರ ಜೊತೆ ಸಭೆ ನಡೆಸಿದರು.ಆದರೆ ಅಧ್ಯಕ್ಷಸ್ಥಾನ ಮುಂದುವರಿಕೆಗೆ ಹೈಕಮಾಂಡ್ ಸೂಚನೆಯನ್ನು ದಿನೇಶ್ ಅಲದಲಗಳೆದರು.ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್,ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಿರಿ ಎಂದು ಹೈಕಮಾಂಡ್ ಹೇಳಿಲ್ಲ
ಅಧ್ಯಕ್ಷರ ನೇಮಕ ವಿಳಂಬ ಬೇಡ. ಆದಷ್ಟು ಬೇಗ ನೇಮಕ ಮಾಡಬೇಕು.

   ಶಾಸಕಾಂಗ ನಾಯಜ ಹಾಗೂ ವಿಪಕ್ಷ ನಾಯಕ ಮತ್ತು ಅಧ್ಯರಕ್ಷ ನೇಮಕ ವಿಚಾರದ ಬಗ್ಗೆ ಯಾವೊಬ್ಬ ನಾಯಕರು ಬಹಿರಂಗ ಹೇಳಿಕೆ ನೀಡಬಾರದು.ಆದರೂ ಹುದ್ದೆಗಳನ್ನು ವಿಭಜನೆ ಮಾಡಬೇಕೆಂಬ ಹೇಳಿಕೆಗಳು ಬರುತ್ತಿವೆ.
ಹೈಕಮಾಂಡ್ ತೀರ್ಮಾನ ಮಾಡೋವರೆಗೂ ಇಂತಹ ಹೇಳಿಕೆಗಳು ಸಹಜ ಎಂದರು.

   ಬಿಜೆಪಿಯ ಸಂಪುಟ ವಿಸ್ತರಣೆ ಕುರಿತಾಗಿ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್,ಇದು ತಮ್ಮ ಪಕ್ಷಕ್ಕೆ ಸಂಬಂಧಿಸಿದ ವಿಚಾರವಲ್ಲ. ರಾಜ್ಯಕ್ಕೆ ಸಂಬಂಧಿಸಿದ ವಿಚಾರ.ರಾಜ್ಯದ ಜನರಿಗೆ ಸಂಬಂಧಿಸಿದ ವಿಚಾರ ಹಲವಾರು ಯೋಜನೆಗಳು , ಅಭಿವೃದ್ಧಿ ಕೆಲಸಗಳು ಆಗಬೇಕಿದೆ.

  ಬಿಜೆಪಿ ಆಂತರಿಕ ವಿಚಾರವಾದರೂ ಮುಖ್ಯಮಂತ್ರಿ ಅವರ ನಿರ್ಧಾರದಿಂದ ಹೀಗೆಲ್ಲಾ ಆಗುತ್ತಿದೆ.ಅಧಿವೇಶನ ಬರುತ್ತಿರುವುದರಿಂದ ಆದಷ್ಟು ಬೇಗ ರಾಜ್ಯದ ಹಿತದೃಷ್ಟಿಯಿಂದ ಸಂಪುಟ ವಿಸ್ತರಣೆ ಣೆ ಮಾಡಬೇಕು ಎಂದರು.
ವಿಧಾನ ಪರಿಷತ್‍ಗೆ ಚುನಾವಣೆ ಎದುರಾಗಿರುವುದರಿಂದ ಬಹುಮತ ಇಲ್ಲದ ಕಾರಣ ನಾವು ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ ಎಂದರು.

   ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ,ಸರ್ಕಾರದಲ್ಲಿಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ ಎಂಬುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗೊತ್ತಿದ್ದರೂ ಅವರು ಭರವಸೆ ನೀಡಿದ್ದು ತಪ್ಪು ಎಂದು ಟೀಕಿಸಿದರು.

ನೈತಿಕತೆ ಗಾಳಿಗೆ ತೂರಿ ಬಿಜೆಪಿ ಸರ್ಕಾರ ರಚಿಸಿ

     ಈಗಾಗಲೇ ಆರು ತಿಂಗಳು ಕಳೆದಿವೆ.ಆಡಳಿತ ಯಂತ್ರ ಸಂಪೂರ್ಣ ಕುಸಿದುಹೋಗಿದೆ.ರಾಜ್ಯದ ಅಭಿವೃದ್ಧಿ ಶೂನ್ಯ ಸ್ಥಿತಿ ತಲುಪಿದೆ.ಉಪಚುನಾವಣೆಯಲ್ಲಿ ಮತದಾರರಿಗೆ ಅಭ್ಯರ್ಥಿಗಳಿಗೆ ಸಚಿವರನ್ನಾಗಿ ಮಾಡುವುದಾಗಿ ಆಸೆ ತೋರಿಸಿ ಈಗ ಇಂದು,ನಾ ಳೆ ನಾಡಿದ್ದು ಎಂದು ದೂಡುತ್ತಾ ಈ ಹಂತದಗರೆಗೂ ಬಂದಿದ್ದಾರೆ.

    ಆದರೂ ಸಂಪುಟ ವಿಸ್ತರಣೆ ಇನ್ನೂ ಆಗಿಲ್ಲ.ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ನಡುವೆಯೇ ಭಿನ್ನಾಬಿಪ್ರಾಯಗಳಿವೆ.ಹೀಗಾಗಿ ಅವರು ಕರ್ನಾಟಕದ ಸಂಪುಟ ವಿಸ್ತರಣೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು
ಬಿಜೆಪಿ ನಾಯಕರ ವಿರುದ್ಧ ಈಶ್ವರ್ ಖಂಡ್ರೆ ಕುಟುಕಿದರು.

    ರಾಜ್ಯದಲ್ಲಿ ಹಲವಾರು ಯೋಜನೆಗಳು ,ಕೆಲಸ ಕಾರ್ಯಗಳು ನಡೆಯಬೇಕು .ನೆರೆ ಪೀಡಿತ ಪ್ರದೇಶಗಳಲ್ಲಿ ಇನ್ನೂ ಪರಿಹಾರ ಘೋಷಣೆ ಮಾಡಿಲ್ಲ .ರಜ್ಯದಲ್ಲಿ , ದೇಶದಲ್ಲಿ ಜ್ವಲಂತ ಸಮಸ್ಯೆಗಳಿವೆ ಅದನ್ನು ಬಿಟ್ಟು ಭಾವನಾತ್ಮಕ ವಿಚಾರಗಳನ್ನು ಬಿಜೆಪಿ ಜನರ ಮುಂದೆ ತರುತ್ತಿದೆ ಎಂದು ಖಂಡ್ರೆ ಟೀಕಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap