‘KPSC’ ಮುಖ್ಯ ಪರೀಕ್ಷೆ ಮುಂದೂಡಿದ ರಾಜ್ಯಸರ್ಕಾರ!!

ಬೆಂಗಳೂರು: 

      ಕೆ.ಪಿ.ಎಸ್.ಸಿ. ಹಾಗೂ ಯು.ಪಿ.ಎಸ್.ಸಿ. ಎರಡೂ ಪರೀಕ್ಷೆಗಳು ಒಟ್ಟಿಗೆ ಬಂದ ಹಿನ್ನೆಲೆಯಲ್ಲಿ ಕೆ.ಪಿ.ಎಸ್.ಸಿ. ಮುಖ್ಯ ಪರೀಕ್ಷೆಯನ್ನು ಮುಂದೂಡಿ ಆದೇಶ ಹೊರಡಿಸಲಾಗಿದೆ.

      ಈ ಹಿಂದೆ ಕೇಂದ್ರ ಲೋಕಸೇವಾ ಅಯೋಗ ಪರೀಕ್ಷೆಗಳು 2021 ರ ಜನವರಿ 8 ರಿಂದ 10 ರವರೆ ಹಾಗೂ 16, 17 ರಂದು ನಡೆಯಲಿವೆ. ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆಗಳು 2020 ರ ಡಿಸೆಂಬರ್ 21 ರಿಂದ 24 ಮತ್ತು ಜನವರಿ 02 ರಿಂದ 05 ರವರೆಗೆ ನಿಗದಿಯಾಗಿದ್ದವು.

      ಕೆಪಿಎಸ್ ಸಿ ಮುಖ್ಯ ಪರೀಕ್ಷೆ ಹಾಗೂ ಯುಪಿಎಸ್ಸಿ ಪರೀಕ್ಷೆಗಳು ಒಂದು ತಿಂಗಳಲ್ಲಿಯೇ ಹಿಂದೆ ಮುಂದೆ ಇದ್ದ ಕಾರಣ, ಉದ್ಯೋಗಾಕಾಂಕ್ಷಿಗಳಿಗೆ ಗೊಂದಲಕ್ಕೆ ಎಡೆ ಮಾಡಿಕೊಟ್ಟಿತ್ತು. ಅಲ್ಲದೇ ಪರೀಕ್ಷೆ ತಯಾರಿಗೂ ಸಮಸ್ಯೆ ಉಂಟಾಗಿತ್ತು. ಪರೀಕ್ಷೆ ಮುಂದೂಡಿಕೆಗೆ ಸಿಎಂ ಯಡಿಯೂರಪ್ಪ ನಿನ್ನೆ ಸೂಚಿಸಿದ್ದರು.

     ಈ ಹಿನ್ನಲೆಯಲ್ಲಿ ಕೆಪಿಎಸ್ ಸಿ(KPSC) ಯ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಹುದ್ದೆಗಳ ಪರೀಕ್ಷೆಯನ್ನು ಇದೀಗ ಫೆಬ್ರವರಿ 13ರಿಂದ 16ರ ವರೆಗೆ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap