ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಿಸಲು ಹೊಸ ಮಾರ್ಗ!?

ಬೆಂಗಳೂರು:

Image result for bangalore toll

      ನಗರದಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ವಿಪರೀತವಾಗುತ್ತಿದೆ. ಅದರ ಜತೆಗೆ ನಿಯಂತ್ರಣಕ್ಕಾಗಿ ಎಷ್ಟೇ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಿ, ರಸ್ತೆಗಳನ್ನು ಸುಂದರವಾಗಿ ಮಾಡಿದರೂ ಟ್ರಾಫಿಕ್‌ ಜಾಮ್‌ಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.

      ಇದೀಗ ಟ್ರಾಫಿಕ್ ನಿಯಂತ್ರಣಕ್ಕೆ ಮತ್ತೊಂದು ಮಾಸ್ಟರ್ ಪ್ಲಾನ್ ತಯಾರಿಸಿದೆ. ಅದೇನೆಂದರೆ,  ಬೆಂಗಳೂರು ಸುತ್ತ ನಾಲ್ಕು ಟೋಲ್ ರಸ್ತೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೆಆರ್ ಡಿಸಿಎಲ್ ಮೂಲಕ ರಸ್ತೆ ಟೋಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. 

      ಭಾರಿ ಸರಕು ಸಾಗಣೆ ವಾಹನಗಳು ಸೇರಿದಂತೆ ಬೆಂಗಳೂರು ನಗರಕ್ಕೆ ಬಂದು ಹೋಗುವ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ, ಇವುಗಳ ಜತೆಗೆ ದೇವನಹಳ್ಳಿ ಏರ್‌ಪೋರ್ಟ್ ತಕುಪಲು ಬೆಂಗಳೂರು ನಗರದೊಳಗೆ ಬಂದು ಹೋಗುವ ವಾಹನಗಳು ವಿಪರೀತವಾಗಿದೆ.

ಏರ್‌ಪೋರ್ಟ್‌ಗೆ ವ್ಯವಸ್ಥೆ  :

      ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಹನಗಳು ನಗರದೊಳಗೆ ಬರದೆ ನೇರವಾಗಿ ಏರ್‌ಪೋರ್ಟ್ ಗೆ ತೆರಳುವ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತಿದೆ.

ನಾಲ್ಕು ಟೋಲ್ ರಸ್ತೆಗಳು ಎಲ್ಲೆಲ್ಲಿ?

      ಹೊಸಕೋಟೆ, ಬೂದಿಗೆರೆ, ಮೈಲೇನಹಳ್ಳು, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಹಾರೋಹಳ್ಳಿ, ಉರುಗನದೊಡ್ಡಿ, ಕೆಐಎಡಿಬಿ ಕೈಗಾರಿಕಾ ಪ್ರದೇಶ, ಜಿಗಣಿ, ಆನೇಕಲ್ ರಸ್ತೆ, ಆನೇಕಲ್, ಅತ್ತಿಬೆಲೆ, ಸರ್ಜಾಪುರ, ವರ್ತೂರು, ವೈಟ್‌ಫೀಲ್ಡ್, ಹೊಸ ಕೋಟೆ ರಸ್ತೆ, ನೆಲಮಂಗಲ, ಮಧುರೆ, ಬ್ಯಾಥಾ ಮಾರ್ಗದಲ್ಲಿ ಟೋಲ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ. 

      ಈ ನಾಲ್ಕು ಟೋಲ್ ರಸ್ತೆಗಳನ್ನು ಅಭಿವೃದ್ಧಪಡಿಸಲು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಸರ್ಕಾರ ಮುಂದಾಗಿದೆ. ಬಳಿಕ ಟೋಲ್ ಸಂಗ್ರಹದಿಂದ ಬರುವ ಸಂಪನ್ಮೂಲದಿಂದ ಶೇ.50ರಷ್ಟು ಸಾಲ ಮತ್ತು ಬಡ್ಡಿಯನ್ನು ಮರುಪಾವತಿ ಮಾಡುವುದು, ಉಳಿದ ಶೇ.50ರಷ್ಟು ಸಾಲ ಮತ್ತು ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap