ಬೆಂಗಳೂರು :
ನಗರದ ಪ್ರಮುಖ ಆಕರ್ಷಣೀಯ ಪ್ರವಾಸಿ ಕೇಂದ್ರವಾದ ಲಾಲ್‌ಬಾಗ್‌ಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬಿಸಿ ತಟ್ಟಿದ್ದು, ಬರುವ ನವೆಂಬರ್ ತಿಂಗಳಿಂದ ಪ್ರವೇಶ ಶುಲ್ಕ, ವಾಹನಗಳ ನಿಲುಗಡೆ ಮತ್ತು ಕ್ಯಾಮೆರಾ ಬಳಕೆಯ ಶುಲ್ಕ ದುಬಾರಿಯಾಗಲಿದೆ.
ಪ್ರತಿದಿನ ಲಾಲ್‌ಬಾಗ್‌ಗೆ ಸಾವಿರಾರು ಜನ ಭೇಟಿ ನೀಡುತ್ತಿದ್ದು, ಪ್ರವೇಶ ಶುಲ್ಕದಿಂದ ಲಕ್ಷಾಂತರ ರುಪಾಯಿ ಸಂಗ್ರಹವಾಗುತ್ತದೆ. ಆದರೆ, ಈ ಶುಲ್ಕಕ್ಕೆ ಜಿಎಸ್‌ಟಿ ಪಾವತಿಸಲಾಗುತ್ತಿದೆ. ಇದರಿಂದ ಭದ್ರತಾ ಸಿಬ್ಬಂದಿಯ ವೇತನ, ವಿದ್ಯುತ್ ಬಿಲ್ ಹಾಗೂ ಸ್ವಚ್ಛತಾ ಕಾರ್ಯ ಮಾಡುವವರಿಗೆ ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಪ್ರವೇಶ ಶುಲ್ಕ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ.
ಲಾಲ್‌ಬಾಗ್ ಸಾರ್ವಜನಿಕ ಸ್ಥಳವಾಗಿದೆ. ಈ ಹಿನ್ನೆಲೆಯಲ್ಲಿ ಜಿಎಸ್‌ಟಿ ರದ್ದು ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೆ, ತೆರಿಗೆ ಕಡಿತ ಮಾಡುವುದು ಜಿಎಸ್‌ಟಿ ಕೌನ್ಸಿಲ್‌ಗೆ ಸಂಬಂಧಪಟ್ಟವಿಚಾರವಾಗಿದ್ದು, ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ. ಹಾಗಾಗಿ ಶುಲ್ಕ ಹೆಚ್ಚಳಕ್ಕೆ ತೀರ್ಮಾನಿಸಲಾಗಿದೆ.
ಪ್ರಸ್ತುತ ದರ ನೂತನ ದರ
ಪ್ರತಿ ವ್ಯಕ್ತಿಗೆ 20 25
ಕ್ಯಾಮೆರಾ 50 60
ದ್ವಿಚಕ್ರವಾಹನ 20 25
ನಾಲ್ಕು ಚಕ್ರ ವಾಹನ 25 30
ವ್ಯಾನ್ 50 60
ಬಸ್ 100 120
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ