ಬೆಳಗಾವಿ :
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿ ಪುಣೆ-ಬೆಂಗಳೂರು ರಸ್ತೆ ಸಂಪರ್ಕ ಕಡಿತಗೊಂಡಿದ್ದು, ನಾಳೆ ಮಧ್ಯಾಹ್ನದ ವರೆಗೂ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ.
ಬೆಂಗಳೂರಿನಿಂದ ಬೆಳಗಾವಿ ಮಾರ್ಗವಾಗಿ ಪುಣೆಗೆ ಸಂಪರ್ಕಿ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 4 ರ ರಸ್ತೆ ಸ್ಥಗಿತಗೊಂಡಿದ್ದು, ಬೆಳಗಾವಿಯಿಂದ ಕೊಲ್ಲಾಪುರ ಕಡೆಗೆ ಯಾರು ಪ್ರಯಾಣ ಮಾಡದಂತೆ ಉತ್ತರ ಐಜಿಪಿ ರಾಘವೇಂದ್ರ ಸುಹಾಸ್ ಮನವಿ ಮಾಡಿದ್ದಾರೆ.
ನೆರೆಯ ಮಹಾರಾಷ್ಟ್ರದಲ್ಲಿ ಸತತ ಕಳೆದ 8-10 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಪ್ರವಾಹವು ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಹರಿಯುತ್ತಿರುವುದರಿಂದ ಮಹಾರಾಷ್ಟ್ರ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಸೋಮವಾರ ರಾತ್ರಿ 9 ಗಂಟೆಯ ಸುಮಾರಿಗೆ ಕೊಲ್ಹಾಪುರ ಹತ್ತಿರ ನದಿ ನೀರು ಪೂನಾ- ಬೆಂಗಳೂರು ಹೆದ್ದಾರಿ ೪ರ ಮೇಲೆ ನೀರು ಹತ್ತಿದೆ. ಇದರಿಂದಾಗಿ ಬೆಂಗಳೂರು, ಬೆಳಗಾವಿ, ಗೋವಾ, ಹುಬ್ಬಳ್ಳಿ ಧಾರವಾಡ ಸೇರಿದಂತೆ ಇನ್ನಿತರ ಪಟ್ಟಣ ಹಾಗೂ ನಗರಗಳಿಂದ ಪೂನಾ, ಮುಂಬಯಿ ಸೇರಿದಂತೆ ಮಹಾರಾಷ್ಟ್ರದ ಇನ್ನಿತರ ನಗರಗಳಿಗೆ ಸಂಚರಿಸುವ ವಾಹನಗಳನ್ನು ನಿಪ್ಪಾಣಿ ಹಾಗೂ ಗಡಿಭಾಗದಿಂದ ಈಚೇಗೆ ಪೊಲೀಸರು ತಡೆಹಿಡಿಯುವ ಕಾರ್ಯ ಮಾಡುತಿದ್ದಾರೆ.
ಪುಣೆ ಬೆಂಗಳೂರು ಮಧ್ಯೆದ ರಸ್ತೆ ಸಂಪರ್ಕ ಕಡಿತವಾಗಿದ್ದರಿಂದ ಆ.6ರ ಮಧ್ಯಾಹ್ನದ ವರೆಗೂ ರಸ್ತೆ ಸಂಚಾರ ಸ್ಥಗಿತವಾಗಲಿದೆ. ಬೆಳಗಾವಿ ಮಾರ್ಗವಾಗಿ ಪುನಾ ಕಡೆಗೆ ಪ್ರಯಾಣಿಸದಂತೆ ಬೆಳಗಾವಿ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
