ನೆಲ್ಯಾಡಿ:
ಗುಡ್ಡ ಕುಸಿತವಾದ ಕಾರಣ ಮಂಗಳೂರು – ಬೆಂಗಳೂರು ರಾಷ್ಟೀಯ ಹೆದ್ದಾರಿಯ ಶಿರಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟಿಯಿಂದ ಮೇಲ್ಭಾಗದಲ್ಲಿ ಎತ್ತಿನಹಳ್ಳ ಎಂಬಲ್ಲಿ ಶುಕ್ರವಾರವೂ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗುಡ್ಡಕುಸಿತವಾಗಿದೆ.
ಕಳೆದ ವರ್ಷವೂ ಇದೇ ಭಾಗದಲ್ಲಿ ಗುಡ್ಡ ಕುಸಿತವುಂಟಾಗಿ ಹೆದ್ದಾರಿಗೆ ಮಣ್ಣು ಜರಿದು ಬಿದ್ದು ಹೆದ್ದಾರಿ ತಡೆಯುಂಟಾಗಿತ್ತು. ಇದೀಗ ಮತ್ತೆ ಈ ಭಾಗದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.
ಹೆದ್ದಾರಿಗೆ ಜರಿದು ಬಿದ್ದ ಮಣ್ಣನ್ನು ಜೆಸಿಬಿಗಳ ಮೂಲಕ ತೆರವುಗೊಳಿಸಲಾಗುತ್ತಾ ಇದೆ.ಶುಕ್ರವಾರ ರಾತ್ರಿ ವೇಳೆ ಮಣ್ಣಿನ ತೆರವು ಗೊಳಿಸುವ ಕಾರ್ಯ ಮುಂದುವರಿಯಲಿದೆ. ಕಂಟ್ರೋಲ್ ರೂಂ ನಿಂದ ಆಗಲೇ ಶಿರಾಡಿ ಘಾಟಿಯಲ್ಲಿ ಸಂಚಾರ ಅಲ್ಪಕಾಲದ ಮಟ್ಟಿಗೆ ತಡೆಹಿಡಿಯಬೇಕು ಎನ್ನುವ ಆದೇಶ ಬಂದಿದೆ. ಆದ್ದರಿಂದ ಸಂಚಾರ ಸ್ಥಗಿತಗೊಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
