ರೇವಣ್ಣ ಆಯ್ತು ಈಗ ಸಿದ್ದು ಕೈಯಲ್ಲಿ ನಿಂಬೆಹಣ್ಣು!!

ಕಲಬುರ್ಗಿ: 

      ಮೂಡನಂಬಿಕೆಗಳ ಆಚರಣೆಗಳಿಂದ ದೂರವಿರುವ ಮಾಜಿ ಸಿಎಂ ಸಿದ್ದರಾಮಯ್ಯನವರ ಕೈಯಲ್ಲಿ ನಿಂಬೆ ಹಣ್ಣು ಇದ್ದದ್ದು ಆಶ್ಚರ್ಯ ಪಡುವಂತೆ ಮಾಡಿದೆ.

      ಗುಲಬರ್ಗಾ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ಚುನಾವಣೆ ಪ್ರಚಾರಕ್ಕೆಂದು ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರು ಕೈಯಲ್ಲಿ ನಿಂಬೆ ಹಣ್ಣು ಹಿಡಿದುಕೊಂಡು ಅಚ್ಚರಿ ಮೂಡಿಸಿದರು.

     ಇದನ್ನು ಗಮನಿಸಿದ ಪತ್ರಕರ್ತರು, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಏನ್ ಸರ್ ನಿಂಬೆಹಣ್ಣು ಎಂದು ಕೇಳಿದ್ದಕ್ಕೆ,  ವಿಮಾನ ನಿಲ್ದಾಣದಲ್ಲಿ ಯಾರೋ ಕೊಟ್ರು. ಹಿಡ್ಕೊಂಡಿದ್ದೆ ಅಷ್ಟೇ. ಇದ್ರಲ್ಲಿ ನಂಗೆ ನಂಬಿಕೆಯಿಲ್ಲ. ನಿಂಗೆ ಒಳ್ಳೆಯದಾದರೆ ಆಗ್ಲಿ ಅಂತ ಹೇಳಿ ಪಕ್ಕದಲ್ಲಿದ್ದ ಪತ್ರಕರ್ತರ ಜೇಬಿಗೆ ನಿಂಬೆಹಣ್ಣು ಹಾಕಿ, ನಗುತ್ತಲೇ ಸಮಜಾಯಿಷಿ ನೀಡಿದರು.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

Recent Articles

spot_img

Related Stories

Share via
Copy link