ರಾಮನಗರ : ಮಲಗಿದ್ದ ಮಗುವನ್ನು ಕೊಂದಿದ್ದ ಚಿರತೆ ಸೆರೆ!!

ರಾಮನಗರ :

      ಮೂರು ವರ್ಷದ ಮಗುವನ್ನು ಮನೆಯಿಂದ ಎಳೆದೊಯ್ದು ಕೊಂದು ಹಾಕಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

     ಜಿಲ್ಲೆಯ ಮಾಗಡಿ ತಾಲ್ಲೂಕಿನ ಕದರಯ್ಯನಪಾಳ್ಯದಲ್ಲಿ ಕಳೆದ ವಾರ ಹೇಮಂತ್ ಎಂಬ 3 ವರ್ಷದ ಮಗು ಮನೆಯಲ್ಲಿ ಪೋಷಕರೊಂದಿಗೆ ಮಲಗಿದ್ದ ವೇಳೆ ಮನೆಯೊಳಗೆ ನುಗ್ಗಿದ ಚಿರತೆ ಎಳೆದುಕೊಂಡು ಹೋಗಿ ಕೊಂದು ಹಾಕಿತ್ತು.

 ರಾಮನಗರ : ಮಲಗಿದ್ದ ಮಗು ಚಿರತೆಗೆ ಬಲಿ!!

      ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದು ಅಲ್ಲಿ ಬೋನ್ ಇಡಲಾಗಿತ್ತು. ಬೋನಿನೊಳಗೆ ಚಿರತೆ ಬಿದ್ದಿದ್ದು, ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

     2 ವರ್ಷದ ಗಂಡು ಚಿರತೆ ಇದಾಗಿದ್ದು ಇದೆ ಚಿರತೆ ಮಗುವನ್ನು ಕೊಂದಿರಬಹುದೆಂದು ಹೇಳಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link