ಬಿಜೆಪಿ ನಮ್ಮ ಸರ್ಕಾರಕ್ಕೆ ಸಲಹೆ ನೀಡಲಿ : ಡಿಕೆಶಿ

ಬೆಂಗಳೂರು :

     ವಿರೋಧ ಪಾರ್ಟಿಯವರು ಸರ್ಕಾರಕ್ಕೆ ಸಲಹೆ ನೀಡಬೇಕು, ಆದರೆ ಬಿಜೆಪಿ ಗೆ ಅಶಾಂತಿ ಮೂಡಿಸುವುದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

      ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್ ನಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಜನರಿಗೆ ಸುಮ್ಮನೆ ಕನ್ಫ್ಯೂಸ್ ಮಾಡುತ್ತಿದ್ದಾರೆ. ಇದು ದೇಶದ ದೊಡ್ಡ ಸ್ವಾಭಿಮಾನದ ವಿಚಾರ. ಟಿಪ್ಪು ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ತ್ಯಾಗ ಮಾಡಿದವರು. ಇದು ದೇಶದ ಇತಿಹಾಸ ವಿಚಾರದಲ್ಲಿ ಇಂತಹ ರಾಜಕಾರಣ ಮಾಡುವುದು ಸರಿಯಲ್ಲ. ಶಾಂತಿ ಪಾಲನೆ ಈ ದೇಶದ ಐಕ್ಯತೆ. ಬಿಜೆಪಿಯವರು ಇದನ್ನು ಕಾಪಾಡಿಕೊಂಡು ಹೋಗಬೇಕು ಎಂದರು.

       ವಿರೋಧ ಪಕ್ಷ ಬಿಜೆಪಿಗೆ ಜನರು ಆಶೀರ್ವಾದ ಮಾಡಿದಾಗ ಅವರು ಅಧಿಕಾರಕ್ಕೆ ಬರಲಿ. ನಾವು ಅವರಿಗೆ ಸಹಕಾರ ನೀಡುತ್ತೇವೆ. ಬೆಳಗ್ಗೆ, ಸಂಜೆ ರಾಜಕಾರಣ ಮಾಡುತ್ತಾ ಕುಳಿತರೆ ಇದರಿಂದ ಉಪಯೋಗ ಏನಿದೆ. ನಾವು ಏನಾದರೂ ತಪ್ಪು ಮಾಡಿದ್ದರೆ ಅವರು ಹೇಳಲಿ, ಬೇಕಾದರೆ ಗಲ್ಲು ಶಿಕ್ಷೆ ನೀಡಲಿ. ಎರಡೂ ಪಕ್ಷದ ಎಲ್ಲ ಶಾಸಕರಿಗೆ, ಸಂಸದರಿಗೆ ಜವಾಬ್ದಾರಿ ಇದೆ. ಜನರ ಹಿತವನ್ನು ಕಾಪಾಡಬೇಕು ಎಂದು ಅವರು ಹೇಳಿದ್ದಾರೆ. 

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link