ಲಾಕ್ ಡೌನ್ : ಮೇ.15ರವರೆಗೂ ಮದ್ಯ ಸಿಗೋದು ಡೌಟ್..!!

ಬೆಂಗಳೂರು : 

      ರಾಜ್ಯದಲ್ಲಿ ಮೇ.3ರ ನಂತ್ರವೂ ಲಾಕ್ ಡೌನ್ ಮುಂದುವರೆಯಲಿದೆ ಎಂದು ಮಾತು ಕೇಳಿಬರುತ್ತಿದ್ದು, ಹೀಗಾಗಿ ಮೇ.15ರವೆರೆಗೂ ಮದ್ಯ ಸಿಗೋದು ಡೌಟ್ ಎನ್ನಲಾಗುತ್ತಿದೆ.

      ಮೇ.3ರ ನಂತ್ರ ದೇಶದಲ್ಲಿ ಲಾಕ್ ಡೌನ್ ಮುಂದುವರೆಸಬೇಕೆ ಅಥವಾ ಮುಕ್ತಾಯಗೊಳಿಸಬೇಕೆ ಎನ್ನುವ ಬಗ್ಗೆ ಇಂದು ಎಲ್ಲಾ ರಾಜ್ಯಗಳ ಸಿಎಂಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫೆರೆನ್ಸ್ ಮೂಲಕ ಮಾತುಕತೆ ನಡೆಸಿದರು. ಇಂತಹ ಸಂವಾದದಲ್ಲಿ ಯಾವುದೇ ಕಾರಣಕ್ಕೂ ಲಾಕ್ ಡೌನ್ ವೇಳೆಯಲ್ಲಿ  ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಬಾರದು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. 

      ಲಾಕ್ ಡೌನ್ ವೇಳೆಯಲ್ಲಿ ಮಾರಾಟಕ್ಕೆ ಯಾವುದೇ ರೀತಿಯಲ್ಲಿ ಅವಕಾಶ ಮಾಡಿಕೊಡಬಾರದು ಎಂಬುದಾಗಿ ಅನೇಕ ರಾಜ್ಯದ ಸಿಎಂಗಳು ಪ್ರಧಾನಿಯವರಿಗೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.  ಹೀಗಾಗಿ ರಾಜ್ಯದಲ್ಲೂ ಇದೇ ನಿರ್ಧಾರಕ್ಕೆ ಮುಖ್ಯಮಂತ್ರಿ ಬಂದಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮೇ.15ರವೆರೆಗೂ ಮದ್ಯ ಸಿಗೋದು ಡೌಟ್ ಆಗಿದೆ.

      ಈ ವೇಳೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮೇ.3ರ ನಂತ್ರವೂ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರಿಕೆ ಬಗ್ಗೆ ಪ್ರಸ್ತಾಪವನ್ನು ಮಾಡಿದ್ದಾರೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ