ನಾಳೆಯಿಂದ ರಾಜ್ಯದ ಪಬ್, ಕ್ಲಬ್ ಗಳಲ್ಲೂ ಸಿಗಲಿದೆ ಮದ್ಯ!!

ಬೆಂಗಳೂರು :

      ರಾಜ್ಯ ಸರ್ಕಾರದಿಂದ ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ನಾಳೆಯಿಂದ ರಾಜ್ಯದ್ಯಂತ ಷರತ್ತುಗಳ ಮೇರೆಗೆ ಎಲ್ಲೆಡೆ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.

      ಈ ಕುರಿತಂತೆ ಅಬಕಾರಿ ಸಚಿವ ಎಚ್.ನಾಗೇಶ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದು, ನಾಳೆಯಿಂದ ರಾಜ್ಯಾದ್ಯಂತ ಪಬ್ ಮತ್ತು ಕ್ಲಬ್, ಎಲ್ಲಾ ಮದ್ಯದಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ ಕಂಡಿಷನ್ಸ್ ಹಾಕಿದ್ದು, ಎಂಆರ್ ಪಿ ಬೆಲೆಯಲ್ಲೇ ಮಾರಬೇಕು. ಇದರೊಂದಿಗೆ ಪಾರ್ಸಲ್ ವ್ಯವಸ್ಥೆಗಷ್ಟೇ ಅನುಮತಿ ಇದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಇತರೇ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ. ಇಲ್ಲದಿದ್ದರೆ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಮಾತ್ರ ಮಾರಾಟ ಮಾಡಬೇಕು ಎಂದು ಹೇಳಿದ್ದಾರೆ. 

Quality liquor at cheaper rates : Excise Minister H Nagesh ...

      ಕಳೆದ ಕೆಲ ದಿನಗಳ ಹಿಂದೆ ಷರತ್ತುಗಳ ಮೇರೆಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಈ ವೇಳೆ, ಎಲ್ಲೆಡೆ ಬಾರ್ ಗಳ ಮುಂದೆ ಎಣ್ಣೆ ಪ್ರಿಯರ ಉದ್ದುದ್ದ ಸಾಲುಗಳೇ ಕಂಡುಬಂದಿದ್ದವು. ಇದರೊಂದಿಗೆ ಕ್ಲಬ್ ಹಾಗೂ ಪಬ್ ಗಳ ಮಾಲೀಕರ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತಮಗೂ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಾಳೆಯಿಂದ ಎಲ್ಲ ಕ್ಲಬ್, ಪಬ್ ಗಳಲ್ಲೂ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap