ಹಿರಿಯೂರು :
ಲಾರಿಯು ಇನ್ನೊಂದು ಲಾರಿಯನ್ನು ಹಿಂದಿಕ್ಕುವ ಸಲುವಾಗಿ ಎದುರಿಗೆ ಬರುತ್ತಿದ್ದ ಬಸ್ಸಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭಿವಿಸಿದ್ದು, ಚಾಲಕರೂ ಸೇರಿದಂತೆ ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿವೆ.
ತಾಲೂಕಿನ ಹರ್ತಿಕೋಟೆ ಗ್ರಾಮದ ಹತ್ತಿರ ಇಂದು ಬೆಳಿಗ್ಗೆ ಸುಮಾರು 9.45ರಲ್ಲಿ ಚಳ್ಳಕೆರೆ ಕಡೆಯಿಂದ ಬರುತಿದ್ದ ಲಾರಿಯು ಇನ್ನೊಂದು ಲಾರಿಯನ್ನು ಹಿಂದಿಕ್ಕುವ ಸಂದರ್ಭದಲ್ಲಿ ಎದುರಿಗೆ ಹಿರಿಯೂರು ಕಡೆಯಿಂದ ಬರುತಿದ್ದ ವಿಜಯಲಕ್ಷ್ಮಿ ಬಸ್ಸಿಗೆ ಮುಖಾಮುಖಿ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಎರಡೂ ವಾಹನಗಳ ಚಾಲಕರಿಗೆ ಗಂಭೀರ ಗಾಯಗಳಾಗಿದ್ದು ಹಲವಾರು ಪ್ರಯಾಣಿಕರಿಗೆ ಸಹ ಏಟು ಬಿದ್ದಿವೆ. ತಕ್ಷಣವೇ ಸ್ಥಳೀಯರು ನೆರವಿಗೆ ಧಾವಿಸಿ ಗಾಯಾಳುಗಳನ್ನು ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ಸಾಧಿಸಿದ್ದು ಸ್ಥಳಕ್ಕೆ ಐಮಂಗಲ ಪೋಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಳ್ಳುತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ