ಬಾಂಬ್ ಸ್ಫೋಟಿಸಿ ಪ್ರೇಮಿಗಳ ಆತ್ಮಹತ್ಯೆ!!!

ಕೇರಳ:

      ವ್ಯಕ್ತಿಯೊಬ್ಬ ತಾನು ಹೊಂದಿದ್ದ ಅಕ್ರಮ ಸಂಬಂಧಕ್ಕೆ ಆಕ್ಷೇಪ ವ್ಯಕ್ತವಾದುದರಿಂದ ಬೇಸತ್ತು, ಮೈಗೆ ಬಾಂಬ್‌ ಕಟ್ಟಿಕೊಂಡು ಅದನ್ನು ಸ್ಫೋಟಿಸಿಕೊಳ್ಳುವ ಮೂಲಕ ಸಾವನ್ನಪ್ಪಿದ್ದಾನೆ.

      ಈ ಘಟನೆ ವಯನಾಡ್‍ನ ನ್ಯಾಕಟ್ಟಿಯಲ್ಲಿ ಶುಕ್ರವಾರ ನಡೆದಿದೆ. ಮೃತರನ್ನು ಅಮಲಾ(38) ಮತ್ತು ಮೂಲಂಕವು ನಿವಾಸಿ 45 ವರ್ಷದ ಬೆನ್ನಿ ಎಂದು ಗುರುತಿಸಲಾಗಿದೆ.

       ವಯನಾಡು ಜಿಲ್ಲೆಯ ಸುಲ್ತಾನ್‌ ಬಥೇರಿಯ ಬೆನ್ನಿ (45) ಎಂಬ ವಿವಾಹಿತನಿಗೆ, ಸಮೀಪದ ನೈಕ್ಕಟ್ಟಿಯ ಅಮ್ಲಾ ಎಂಬ ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧವಿತ್ತು. ಈ ಬಗ್ಗೆ ಎರಡೂ ಕುಟುಂಬಗಳ ಸದಸ್ಯರು ಹಲವು ಬಾರಿ ಎಚ್ಚರಿಕೆ ನೀಡಿದ ಹೊರತಾಗಿಯೂ ಇಬ್ಬರು ತಮ್ಮ ಚಟುವಟಿಕೆ ಮುಂದುವರೆಸಿದ್ದರು.

      ತಾನು ಹೊಂದಿದ್ದ ಅಕ್ರಮ ಸಂಬಂಧಕ್ಕೆ ಆಕ್ಷೇಪ ವ್ಯಕ್ತವಾದುದರಿಂದ ಬೇಸತ್ತು, ಕೋಪಗೊಂಡ ಬೆನ್ನಿ ಶುಕ್ರವಾರ ತನ್ನ ಮೈಗೆ ಜಿಲೆಟಿನ್‌ ಕಡ್ಡಿಗಳನ್ನು ಕಟ್ಟಿಕೊಂಡು ಬಂದಿದ್ದ ಬೆನ್ನಿ, ಅಮ್ಲಾಳನ್ನು ಗಟ್ಟಿಯಾಗಿ ಹಿಡಿದುಕೊಂಡು ಬಳಿಕ ಜಿಲೆಟಿನ್‌ ಕಡ್ಡಿಗೆ ಬೆಂಕಿ ಹಚ್ಚಿಕೊಂಡು ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಕೃತ್ಯದ ವೇಳೆ ತನ್ನ ಪ್ರೇಯಸಿಯನ್ನೂ ಆತ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದ ಕಾರಣ ಆಕೆ ಕೂಡಾ ಸಾವನ್ನಪ್ಪಿದ್ದಾಳೆ. ಸ್ಫೋಟದ ತೀವ್ರತೆಗೆ ಇಬ್ಬರ ದೇಹಗಳೂ ಛಿದ್ರಛಿದ್ರವಾಗಿವೆ.

      ಫೋರೆನ್ಸಿಕ್ ಅಧಿಕಾರಿಗಳು ಶನಿವಾರ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದು, ಪ್ರಕರಣ ಸಂಬಂಧ ಸುಲ್ತಾನ್ ಬಥೆರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap