ಹಾಸನ :

ಅಂತರ್ಜಾತಿ ಕಾರಣಕ್ಕೆ ಹೆದರಿ ಯುವ ಪ್ರೇಮಿಗಳಿಬ್ಬರು ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿ ಮನಕಲಕುವ ಘಟನೆ ಬಾಗೂರು ಗ್ರಾಮದಲ್ಲಿ ನಡೆದಿದೆ.
ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಗ್ರಾಮದ ಸುಶ್ಮಿತಾ (18) ಹಾಗೂ ಮತಿಘಟ್ಟ ಗ್ರಾಮದ ರಮೇಶ್( 19) ಮೃತ ಯುವಜೋಡಿ.
ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಬಳಿಯ ಹೇಮಾವತಿ ನಾಲೆಯ ಸುರಂಗ ಬಳಿ ಬೈಕ್ ನಿಲ್ಲಿಸಿ ನವೆಂಬರ್ 16ರಂದು ಕಾಣೆಯಾಗಿದ್ದ ಯುವ ಜೋಡಿಯ ಮೃತದೇಹ ಇಂದು ಹೇಮಾವತಿ ನಾಲೆಯಲ್ಲಿ ಪತ್ತೆಯಾಗಿದೆ.

ಐಟಿಐ ಓದುತ್ತಿದ್ದ ರಮೇಶ್ ಹಾಗೂ ಪದವಿ ವ್ಯಾಸಂಗ ಮಾಡುತ್ತಿದ್ದ ಸುಶ್ಮಿತಾ ನಡುವೆ ಒಂದು ವರ್ಷದಿಂದ ಪ್ರೀತಿ ಚಿಗುರೊಡೆದಿದ್ದು ಮನೆಯವರ ವಿರೋಧಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮನೆಯವರ ವಿರೋಧಕ್ಕೆ ಹೆದರಿ ಆತ್ಮಹತ್ಯೆಗೆ ಶಾರಣಾಗಿರಬಹುದು ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ ಪ್ರೇಮಿಗಳು ತಾವೇ ಆತ್ಮಹತ್ಯೆಗೆ ಶರಣಾಗಿದ್ದಾರೋ ಅಥವಾ ಯಾರಾದರೂ ಕೊಲೆ ಮಾಡಿ ನಾಲೆಗೆ ಎಸೆದಿದ್ದಾರೋ ಎಂಬ ಅನುಮಾನವೂ ವ್ಯಕ್ತವಾಗುತ್ತಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರೇಮಿಗಳ ಮೃತದೇಹ ಬಾಗೂರು-ನವಿಲೆ ಕಾಲುವೆಯಲ್ಲಿ ತೇಲಿ ಹೋಗುವ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ತುಮಕೂರು ಜಿಲ್ಲೆ ನೊಣವಿನಕೆರೆ ಠಾಣಾ ವ್ಯಾಪ್ತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








