ಯಾದಗಿರಿ:
ಮನೆಯಲ್ಲಿ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರೇಮಿಗಳಿಬ್ಬರು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಯಾದಗಿರಿ ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಗೊಂದಡಗಿ ಗ್ರಾಮದ ಹನುಮಂತ (25) ಮತ್ತು ಮಹಾದೇವಿ (18) ಆತ್ಮಹತ್ಯೆ ಮಾಡಿಕೊಂಡವರು. ಅಟೋ ಚಾಲಕನಾಗಿದ್ದ ಹನುಮಂತ ಮತ್ತು ಮಹಾದೇವಿ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅನ್ಯ ಜಾತಿಯವರಾಗಿದ್ದ ಇವರ ಪ್ರೇಮಕ್ಕೆ ಪೋಷಕರು ಅಡ್ಡಿಪಡಿಸಿದ್ದರು ಎನ್ನಲಾಗುತ್ತಿದೆ. ಹೀಗಾಗಿ ಕಳೆದ ಸೆಪ್ಟೆಂಬರ್ 8 ನೇ ತಾರೀಕಿನಂದು ಮನೆ ಬಿಟ್ಟು ತೆರಳಿದ್ದರು ಎಂದು ತಿಳಿದು ಬಂದಿದೆ.
ಬುಧವಾರ ಗ್ರಾಮದ ಹೊರ ವಲಯದಲ್ಲಿರುವ ಕಲ್ಯಾಣಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವೇಳೆ ಪ್ರೇಮಿಗಳು ತಮ್ಮ ಕುಟುಂಬ ಹಾಗೂ ತಂದೆ, ತಾಯಿಯರ ಕ್ಷಮೆ ಕೇಳಿದ್ದಾರೆ.
ಇಂದು ಇಬ್ಬರ ಮೃತದೇಹಗಳು ನೀರಿನಲ್ಲಿ ಮೇಲೆ ತೇಲಿದಾಗ ಆತ್ಮಹತ್ಯೆ ವಿಚಾರ ಬಹಿರಂಗವಾಗಿದೆ. ಸೈದಾಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ