ತುಮಕೂರು:
ಹಳೆಯ ಪ್ರೇಮಿಗಳಿಬ್ಬರು ಮದುವೆಯಾಗಲು ಮನೆಯವರು ಒಪ್ಪದ ಕಾರಣ ಒಬ್ಬರನ್ನೊಬ್ಬರು ಬಿಟ್ಟಿರಲಾಗದೇ ಸೈನೆಡ್ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆಶಿರಾ ತಾಲೂಕಿನ ಭೂವನಹಳ್ಳಿಯಲ್ಲಿ ಬಳಿ ನಡೆದಿದೆ.
ಮಾಗೋಡು ಗ್ರಾಮದ 20 ವರ್ಷದ ನಿವೇದಿತಾ ಹಾಗೂ ಭೂವನಹಳ್ಳಿಯ 25 ವರ್ಷದ ಚೇತನ್ ಆತ್ಮಹತ್ಯೆ ಮಾಡಿಕೊಂಡವರು. ಚೇತನ್ ಮತ್ತು ನಿವೇದಿತಾ ಇಬ್ಬರು ಸುಮಾರು 3-4 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರ ಪ್ರೀತಿ ವಿಚಾರ ಮನೆಯವರಿಗೆ ಗೊತ್ತಾಗಿದೆ. ಆದರೆ ಎರಡು ಕುಟುಂಬದವರೂ ಇವರ ಮದುವೆಗೆ ನಿರಾಕರಿಸಿದ್ದಾರೆ. ಅಷ್ಟೆ ಅಲ್ಲದೆ ಒಂದೂವರೆ ತಿಂಗಳ ಹಿಂದೆಯಷ್ಟೆ ಬೇರೊಬ್ಬ ಯುವತಿಯ ಜೊತೆಗೆ ಬಲವಂತವಾಗಿ ಮೃತ ಚೇತನ್ ಮದುವೆ ಮಾಡಿಸಿದ್ದಾರೆ.
ಕಳೆದ ರಾತ್ರಿ ಪ್ರೇಯಸಿ ಭೇಟಿ ಮಾಡಿದ್ದ ಯುವಕ ಆಕೆಯೊಂದಿಗೆ ಭೂವನಹಳ್ಳಿಯ ಹೊಲಕ್ಕೆ ಬಂದು ಸೈನೆಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮುಂಜಾನೆ ಜನರು ಹೊಲದ ಬಳಿ ಹೋದಾಗ ವಿಷಯ ಗೊತ್ತಾಗಿದೆ.
ಮಾಹಿತಿ ತಿಳಿದು ಶಿರಾ ನಗರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಇಬ್ಬರ ಮೃತದೇಹವನ್ನು ತುಮಕೂರಿನ ಶಿರಾ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ. ಶಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ