ದೆಹಲಿ :
ಕಳೆದ ಕೆಲವು ದಿನಗಳಿಂದ ಸಿಲೆಂಡರ್ ಬೆಲೆ ಏರುತ್ತಿರುವುದನ್ನು ಕಂಡು ಚಿಂತೆಗೊಳಗಾಗಿದ್ದ ದೇಶದ ಜನತೆಗೆ ಇದೀಗ ಕೇಂದ್ರ ಸರಕಾರ ಸಿಹಿ ಸುದ್ದಿ ನೀಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕಡಿಮೆಯಾಗುತ್ತಿರುವ ಪರಿಣಾಮ ಅಡುಗೆ ಅನಿಲದ ದರವೂ ಇಳಿಕೆಯಾಗಿದೆ. ಸಬ್ಸಿಡಿ ಸಹಿತ ಹಾಗೂ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ ತೈಲ ಕಂಪೆನಿಗಳು ಇಳಿಕೆ ಘೋಷಿಸಿವೆ.
ಆ ಮೂಲಕ ಕೇಂದ್ರ ಸರಕಾರ ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್‌ಗೆ ರೂ. 6.52 ಕಡಿಮೆಯಾಗಿದ್ದು, ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 133 ರೂ. ಇಳಿಕೆಯಾಗಿದೆ.
ದೆಹಲಿಯಲ್ಲಿ ಸಬ್ಸಿಡಿ ಸಿಲಿಂಡರ್‌ಗೆ 500.90 ರೂ. ಆಗಲಿದೆ. ಕಳೆದ ಜೂನ್‌ನಿಂದ ಅಡುಗೆ ಅನಿಲದ ಬೆಲೆ ಸತತ ಏರಿಕೆ ಕಂಡಿತ್ತು. ಅಂದಿನಿಂದ ಈವರೆಗೆ ಸಬ್ಸಿಡಿ ಸಿಲಿಂಡರ್ ಮೇಲೆ 14.13 ರೂ. ಏರಿಕೆ ಮಾಡಲಾಗಿತ್ತು. ಇನ್ನೊಂದೆಡೆ ಸಬ್ಸಿಡಿ ರಹಿತ ಸಿಲಿಂಡರ್ ದರ ದಿಲ್ಲಿಯಲ್ಲಿ 809.50 ರೂ. ಆಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ