ದೆಹಲಿ:
ಒಂದೆಡೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗುತ್ತಿದ್ದರೆ, ಮತ್ತೊಂದೆಡೆ, ತೈಲ ಕಂಪನಿಗಳು ಮತ್ತೆ ಎಲ್ಪಿಜಿಯ ಬೆಲೆಯನ್ನು ಹೆಚ್ಚಿಸಿವೆ.
ಸತತ ಮೂರನೇ ತಿಂಗಳು ಎಲ್ ಪಿ ಜಿ ಬೆಲೆಯಲ್ಲಿ ಹೆಚ್ಚಳವಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್ ವೆಬ್ಸೈಟ್ ಮಾಹಿತಿ ಪ್ರಕಾರ ಸಬ್ಸಿಡಿ ರಹಿತ ದೇಶೀಯ ಅನಿಲ ಸಿಲಿಂಡರ್ (14.2 ಕೆಜಿ) ಬೆಲೆ 76.5 ರೂಪಾಯಿ ಹೆಚ್ಚಾಗಿದೆ. ಮೂರು ತಿಂಗಳಲ್ಲಿ ದೇಶೀಯ ಎಲ್ಪಿಜಿ ಸಿಲಿಂಡರ್ನ ಬೆಲೆ ಸುಮಾರು 105 ರೂಪಾಯಿ ಹೆಚ್ಚಾಗಿದೆ.
ವಾಣಿಜ್ಯ ಸಿಲಿಂಡರ್ ಗಳ ಬೆಲೆ 193 ರೂಪಾಯಿ ಹೆಚ್ಚಿಸಲಾಗಿದೆ. ಮೂರು ತಿಂಗಳ ಹಿಂದೆ ಆಗಸ್ಟ್ನಲ್ಲಿ ದೇಶೀಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ 574.50 ರೂಪಾಯಿಯಿತ್ತು. ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1004 ರೂಪಾಯಿಯಿತ್ತು. ಇದಲ್ಲದೆ, 5 ಕೆಜಿ ಸಣ್ಣ ಸಿಲಿಂಡರ್ ಈಗ 264.50 ರೂಗಳಿಗೆ ಲಭ್ಯವಿದೆ. ಎಲ್ಲಾ ಮೂರು ರೀತಿಯ ಸಿಲಿಂಡರ್ಗಳ ಹೊಸ ಬೆಲೆಗಳು ನವೆಂಬರ್ 1 ರಿಂದ ಜಾರಿಗೆ ಬಂದಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/06/LPG-cylinder-AV.jpg)