ನಾಲ್ಕು ದಿನದಲ್ಲಿ ಮತ್ತೆ ‘LPG ಗ್ಯಾಸ್’ ಬೆಲೆ ಏರಿಕೆ..!

ಬೆಂಗಳೂರು : 

    14.2 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್‌ ದರ ಮಾ.1ರಿಂದ ₹ 25 ರೂಪಾಯಿ  ಏರಿಕೆಯಾಗಿದ್ದು, ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದೆ.

      ಈ ಹಿಂದೆ ಸಿಲಿಂಡರ್ ದರ 797 ರೂ. ಇತ್ತು, ಇದೀಗ 25 ರೂ. ಏರಿಕೆಯಾಗಿರುವುದರಿಂದ ಸಿಲಿಂಡರ್ ಗ್ಯಾಸ್ ಖರೀದಿಸುವವರ 797 ರೂಪಾಯಿ ಬದಲು, ಇದೀಗ 822 ರೂಪಾಯಿ ನೀಡಬೇಕಿದೆ.

     ಫೆಬ್ರವರಿ ತಿಂಗಳಲ್ಲಿ 3 ಬಾರಿ ಗ್ಯಾಸ್ ಬೆಲೆ ಏರಿಕೆಯಾಗಿತ್ತು. ಫೆಬ್ರವರಿ 4, 14 ಹಾಗೂ 25ಕ್ಕೆ ಏರಿಕೆಯಾಗಿತ್ತು. ಈ ಮೂಲಕ ಫೆಬ್ರವರಿಯಲ್ಲಿ 100 ರೂಪಾಯಿ ಹೆಚ್ಚಳವಾಗಿದೆ.

      ಡಿಸೆಂಬರ್ ತಿಂಗಳಲ್ಲಿ 594 ರೂಪಾಯಿ ಇದ್ದ ಬೆಲೆ 644 ರೂಪಾಯಿ(Rupees)ಗೆ ಏರಿಕೆಯಾಗಿತ್ತು. ಇನ್ನು ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 96 ರೂಪಾಯಿ ಏರಿಕೆಯಾಗಿದೆ. ಇದೀಗ ಕಮರ್ಷಿಯಲ್ ಸಿಲಿಂಡರ್ ದರ 1,666 ರೂಪಾಯಿ ಆಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap