ಮಧುಗಿರಿ :
ಪ್ರಸ್ತುತ ದಿನಗಳಲ್ಲಿ ಯುವಕರು ಆಡಂಬರದ ವಿವಾಹವನ್ನು ಬಿಟ್ಟು ಸರಳ ವಿವಾಹ ಮಾಡಿಕೊಳ್ಳುವ ಮೂಲಕ ಹೊಸ ಚಿಂತನೆ ಮಾಡುತ್ತಿರುವುದು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ರವಾನೆ ಮಾಡಿದಂತಾಗಿದೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಅವರು ಪಟ್ಟಣದ ಪಾವಗಡ ರಸ್ತೆಯ ಸಮೀಪ ಇರುವ ಅಂಬೇಡ್ಕರ್ ಪುತ್ಥಳಿಯ ಅವರಣವನ್ನೆ ವಿವಾಹಮಂಟಪವನ್ನಾಗಿಸಿ ಬುದ್ಧ ಶಾಸನದ ಮೂಲಕ ವಿವಾಹವಾದ ತಾಲ್ಲೂಕಿನ ಜೀವಿಕಾ ಸಂಘಟನೆ ಮಂಜುನಾಥ್ ಮತ್ತು ಸಿರಾ ತಳಾಗುಂದಾ ಗ್ರಾಮದ ಟಿ.ಎಸ್.ಸುಶ್ಮಿತಾ ವಧುವರರನ್ನು ಆಶೀರ್ವದಿಸಿ ಮಾತನಾಡಿದರು.
ಡಾ. ಅಂಬೇಡ್ಕರ್ ಪುತ್ಥಳಿಯ ಸಮ್ಮುಖದಲ್ಲಿ ಸರಳ ವಿವಾಹ ಮಹೋತ್ಸವ ಹಮ್ಮಿಕೊಂಡಿರುವುದು ಶ್ಲಾಘನೀಯ. ಈ ದಂಪತಿ ಇಂದಿನ ಯುವಕರಿಗೆ ಮಾರ್ಗದರ್ಶಕರಾಗಿದ್ದು, ಸಮಾಜಕ್ಕೆ ಹೊಸ ಚಿಂತನೆಯನ್ನು ನೀಡಿದ್ದಾರೆಂದರು.
ಜೀವಿಕ ಸಂಘಟನೆಯ ಗಂಗಹನುಮಯ್ಯ ಮಾತನಾಡಿ, ನಮ್ಮ ಸಂಘಟನೆಯ ಮಂಜುನಾಥ್ ಜೀತ ವಿಮುಕ್ತರಿಗೆ ಪರಿಹಾರವನ್ನು ಸರಕಾರದಿಂದ ಕೊಡಿಸುವಲ್ಲಿ ಯಶಸ್ವಿಯಾಗಿದ್ದು, ಇವರ ಸರಳ ವಿವಾಹ ಮಾದರಿಯಾಗಿದೆಯೆಂದರು.
ಪುರಸಭಾ ಅಧ್ಯಕ್ಷ ತಿಮ್ಮರಾಜು, ತಾ.ಪಂ ಇಓ ದೊಡ್ಡಸಿದ್ದಯ್ಯ, ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಅಯೂಬ್, ಬೌದ್ಧ ಧರ್ಮದ ಅನುಯಾಯಿ ನಂಜೇಶ್ ಪ್ರಬುದ್ಧ, ದಲಿತ ಮುಖಂಡ ದೊಡ್ಡೇರಿ ಕಣಿಮಯ್ಯ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ