ಮಹಾರಾಷ್ಟ್ರ :
ಪಿಕ್ಅಪ್ ವಾಹನ ಭೀಕರ ಅಪಘಾತಕ್ಕೀಡಾಗಿ ಅಪಘಾತದಲ್ಲಿ 7 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ಧುಲೆ ಜಿಲ್ಲೆಯ ಬಿನ್ಚುನ್ ಗ್ರಾಮದಲ್ಲಿ ನಡೆದಿದೆ.
ಬಿನ್ಚುನ್ ಗ್ರಾಮದಲ್ಲಿರುವ ಭೋರಿ ನದಿಯ ಸೇತುವೆ ಮೇಲೆ ಸಾಗುತ್ತಿದ್ದ ಪಿಕ್ಅಪ್ ವಾಹನ ಆಯತಪ್ಪಿ ನದಿಗೆ ಉರುಳಿದ ಪರಿಣಾಮ ಈ ದುರಂತ ಸಂಭವಿಸಿದ್ದು, ಇದರಿಂದಾಗಿ 7 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲದೇ 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನೆಲ್ಲ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Maharashtra: 7 people killed and more than 20 injured after a pick up vehicle fell off a bridge in a river near Vinchur in Dhule, early morning today. pic.twitter.com/5UgLg8rOFC
— ANI (@ANI) November 30, 2019
ವಿಷಯ ತಿಳಿದ ತಕ್ಷಣವೇ ಘಟಾನಾ ಸ್ಥಳಕ್ಕೆ ತುರ್ತು ವಾಹನ ತಲುಪಿದ್ದು, 108 ನ ಚಾಲಕ ಖುದ್ದು ನೀರಿಗೆ ಧುಮುಕಿ ನೀರಿಗೆ ಬಿದ್ದವರನ್ನು ರಕ್ಷಣೆ ಮಾಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತವು ತಡರಾತ್ರಿ 1 ಗಂಟೆಗೆ ನಡೆದಿದ್ದು, ಅಪಘಾತಕ್ಕೀಡಾಗಿರುವ ಅಷ್ಟೂ ಮಂದಿ ಮಧ್ಯಪ್ರದೇಶದ ನಿವಾಸಿಗಳಾಗಿದ್ದಾರೆ. ಅವರು ಕಬ್ಬು ಕಟಾವು ಮಾಡಲೆಂದು ಪರಿವಾರ ಸಮೇತ ಗುಳೆ ಬಂದಿದ್ದರು ಎನ್ನಲಾಗಿದೆ. ಇನ್ನೂ ಅಪಘಾತದಲ್ಲಿ ಮೃತಪಟ್ಟಿರುವವರಲ್ಲಿ ಹೆಚ್ಚಿನವರು ಮಕ್ಕಳು ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ