ಕೊಡಗು:
ಪತ್ನಿಯ ನಡತೆ ಸರಿಯಲ್ಲ ಎಂದು ಜಗಳವಾಡಿಕೊಂಡ ಪತಿ ಆಕೆಯನ್ನ 30 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಮಡಿಕೇರಿಯ ಹೊಸಬಡಾವಣೆಯಲ್ಲಿ ನಡೆದಿದೆ.
ಜುಬೈದಾ(25) ಪತಿಯಿಂದ ಹತ್ಯೆಯಾದ ದುರ್ದೈವಿ. ಪತಿ ಷರೀಫ್ 7 ವರ್ಷದ ಹಿಂದೆ ಜುಬೈದಾಳನ್ನು ಮದುವೆಯಾಗಿದ್ದು ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದರು. ಕಳೆದ ರಾತ್ರಿ ನಡತೆ ಸರಿಯಿಲ್ಲವೆಂದು ನಡೆದ ಜಗಳ ತಾರಕಕ್ಕೇರಿದೆ. ಇದರಿಂದ ಕುಪಿತಗೊಂಡ ಪತಿರಾಯ ಪತ್ನಿಯ ದೇಹದ 30ಕ್ಕೂ ಹೆಚ್ಚು ಕಡೆ ಇರಿದು ಹತ್ಯೆ ಮಾಡಿದ್ದಾನೆ.
ಷರೀಪ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ