ಮಂಡ್ಯ :
ಶಿವರಾತ್ರಿ ಹಬ್ಬದ ಜಾಗರಣೆ ರಾತ್ರಿ ಚಾಕುವಿನಿಂದ ಇರಿದು ಇಬ್ಬರನ್ನು ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮಹದೇಶ್ವರಪುರದಲ್ಲಿ ನಡೆದಿದೆ.
ಕೋಳಿ ಸುರೇಶ, ನಾಗರಾಜು ಕೊಲೆಯಾದವ ದುರ್ದೈವಿಗಳು. ಮಹದೇಶ್ವರಪುರ ಗ್ರಾಮದವರಾದ ಇವರನ್ನು ಅದೇ ಗ್ರಾಮದ ರೌಡಿಶೀಟರ್ ಕೃಷ್ಣ, ಸುರೇಶ್ ಹಾಗೂ ಸಹಚರರು ಸೇರಿ ಚಾಕುವಿನಿಂದ ಇರಿದು ಅವರನ್ನು ಹತ್ಯೆ ಮಾಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಪ್ರೇಮ ಪ್ರಕರಣ, ಹಣಕಾಸು ವ್ಯವಹಾರದ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದ್ದು, ಮಹದೇಶ್ವರಪುರ ರೌಡಿಶೀಟರ್ ಕೃಷ್ಣನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ