ಮೆಜೆಸ್ಟಿಕ್​ನಿಂದ ಕೇವಲ 10 ರೂ.ಗೆ ಬೆಂಗಳೂರು ಏರ್​ಪೋರ್ಟ್​ಗೆ ರೈಲು!!

ಬೆಂಗಳೂರು :

     ಸಿಲಿಕಾನ್ ಸಿಟಿ ಜನರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಮೆಜೆಸ್ಟಿಕ್ ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ಇನ್ಮುಂದೆ  ರೈಲು ಸೇವೆಯೂ ಪ್ರಯಾಣಿಕರಿಗೆ ಲಭ್ಯವಾಗಲಿದೆ.

     ಹೌದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ದೇವನಹಳ್ಳಿಗೆ ಇಂದಿನಿಂದ ಡೆಮು ವಿಶೇಷ ರೈಲು ಸೇವೆ ಆರಂಭವಾಗಿದೆ. ಈ ಸೌಲಭ್ಯದಿಂದಾಗಿ ಬೆಂಗಳೂರಿನ ವಿವಿಧ ಭಾಗಗಳಿಂದ 10ರಿಂದ 15 ರೂ. ದರದಲ್ಲಿ ಏರ್​ಪೋರ್ಟ್​ ತಲುಪಲು ಸಾಧ್ಯವಿದೆ. ಇದರಿಂದ ದುಬಾರಿ ಹಣ ತೆತ್ತು ವೋಲ್ವೋ ಬಸ್​, ಕ್ಯಾಬ್​ಗಳಲ್ಲಿ ಹೋಗುವುದು ತಪ್ಪಿದಂತಾಗಿದೆ.

     ಈ ವಿಶೇಷ ರೈಲು ಕೆಂಪೇಗೌಡ ಏರ್​ಪೋರ್ಟ್​ ಬಳಿಯ ಹಾಲ್ಟ್​ ಸ್ಟೇಷನ್​ಗೆ ತೆರಳಲಿದೆ. ಈ ರೈಲಿಗೆ ಯಲಹಂಕದಲ್ಲಿ ಸ್ಟಾಪ್​ ಇರಲಿದೆ. ಹಾಲ್ಟ್​ ಸ್ಟೇಷನ್​ನಿಂದ ಉಚಿತ ಬಸ್​ ಮೂಲಕ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗುತ್ತದೆ. 

    ವಿಮಾನಗಳ ಸಮಯವನ್ನು ಗಮನದಲ್ಲಿಟ್ಟುಕೊಂಡು ರೈಲಿನ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಹೆಚ್ಚು ವಿಮಾನಗಳು ಸಂಚರಿಸುವ ಅವಧಿಗೂ ಮೊದಲೇ ಪ್ರಯಾಣಿಕರು ವಿಮಾನ ನಿಲ್ದಾಣ ತಲುಪಲು ಅನುಕೂಲವಾಗುವಂತೆ ರೈಲು ವ್ಯವಸ್ಥೆ ಮಾಡಲಾಗಿದೆ.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ