ರಾಜ್ಯದ 19 ಐಪಿಎಸ್ ಅಧಿಕಾರಿಗಳ ವರ್ಗಾವಣೆ!!!

ಬೆಂಗಳೂರು :

     ಭಾನುವಾರವೆಂಬುದನ್ನೂ ಲೆಕ್ಕಿಸದೇ ರಾಜ್ಯದ 19 ಐಪಿಎಸ್​ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಹಠಾತ್​ ವರ್ಗಾವಣೆ ಮಾಡಿದ್ದು,  ಪೊಲೀಸ್​ ಇಲಾಖೆಗೆ ಇದೊಂದು ಮೇಜರ್ ಸರ್ಜರಿಯಾಗಿದೆ.

      ರಾಜ್ಯ ಸರಕಾರ ಹಠಾತ್ತನೇ ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ್ದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಸುನೀಲ್ ಕುಮಾರ್ ಅವರನ್ನು ಬದಲಾಯಿಸಿದೆ. ಅವರ ಸ್ಥಾನಕ್ಕೆ ಹೊಸ ಪೊಲೀಸ್ ಕಮೀಷನರ್ ಆಗಿ ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

      ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬಂದ ತಿಂಗಳೊಳಗೆ ರಾಜ್ಯ ಪೊಲೀಸ್ ಇಲಾಖೆಗೆ ಸರ್ಕಾರ ಮೇಜರ್ ಸರ್ಜರಿ ಮಾಡಿದೆ. ಹತ್ತೊಂಬತ್ತು ಜನ ಐಪಿಎಸ್ ಅಧಿಕಾರಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

      ಈ ಮೊದಲು ಐಜಿಪಿ ಆಗಿದ್ದ ಅಲೋಕ್​ಗೆ ಎಡಿಜಿಪಿಯಾಗಿ ಬಡ್ತಿ ನೀಡಿ , ಬೆಂಗಳೂರು ನಗರ ಪೊಲೀಸ್ ಕಮಿಷನರ್ ನೇಮಕ ಮಾಡಲಾಗಿದೆ. ಟಿ. ಸುನಿಲ್ ಕುಮಾರ್ ನೇಮಾಕಾತಿ ವಿಭಾಗ ಎಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಅಮ್ರಿತ್ ಪೌಲ್ ಈಸ್ಟರ್ನ್ ರೇಂಜ್ ಐಜಿಪಿ ಆಗಿ ನೇಮಕ ಮಾಡಲಾಗಿದೆ.

     ವರ್ಗಾವಣೆ ಆದ ಐಪಿಎಸ್ ಅಧಿಕಾರಿಗಳು

1. ಟಿ ಸುನೀಲ್ ಕುಮಾರ್ – ಪೋಲಿಸ್ ನೇಮಕಾತಿ ವಿಭಾಗದ ಎಡಿಜಿಪಿ

2. ಅಲೋಕ್ ಕುಮಾರ್ – ಬೆಂಗಳೂರು ನಗರ ಪೊಲೀಸ್ ಆಯುಕ್ತ

3. ಅಮೃತ್ ಪೌಲ್ – ಪೂರ್ವ ವಲಯದ ಐಜಿಪಿ

4. ಉಮೇಶ ಕುಮಾರ್ – ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲಿಸ್ ಆಯುಕ್ತ

5. ಬಿಜಯ್ ಕುಮಾರ್ ಸಿಂಗ್ – ಗೃಹ ಇಲಾಖೆ ಕಾರ್ಯದರ್ಶಿ

6. ಸೌಮೇಂದು ಮುಖರ್ಜಿ – ಆಂತರಿಕ ಭದ್ರತಾ ವಿಭಾಗದ ಐಜಿಪಿ

7. ರಾಘವೇಂದ್ರ ಸುಹಾಸ – ದಕ್ಷಿಣ ವಿಭಾಗದ ಐಜಿಪಿ

8. ಡಾ. ರವಿಕಾಂತೇಗೌಡ – ಬೆಂಗಳೂರು ಅಪರಾಧ ವಿಭಾಗದ ಡಿಐಜಿ

9. ಅಮಿತ್ ಸಿಂಗ್ – ಹೋಂ ಗಾರ್ಡ್ಸ ಮತ್ತು ಸಿವಿಲ್ ಡಿಫೆನ್ಸ್​ ಅಕಾಡಿಮಿ ಕಮಾಂಡೆಂಟ್

10. ಡಾ. ರಾಮನಿವಾಸ ಸೆಪಟ್ – ಬೆಂಗಳೂರು ಎಸಿಬಿ ಎಸ್ಪಿ

11. ಎಂ.ಎನ್. ಅನುಚೇತ್ – ರೈಲ್ವೇಸ್ ಎಸ್ಪಿ

12. ಬಿ.ರಮೇಶ್ – ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ

13. ರವಿ ಡಿ. ಚೆನ್ನಣ್ಣನವರ್ – ಬೆಂಗಳೂರು ಸಿಐಡಿ ಎಸ್ಪಿ

14. ಡಾ. ಭೀಮಾಶಂಕರ್ – ಬೆಂಗಳೂರು ನೈರುತ್ಯ ವಿಭಾಗದ ಡಿಸಿಪಿ

15. ಸಿ.ಬಿ ರೈಶ್ಯನಾಥ್ – ಮೈಸೂರು ಎಸ್ಪಿ

16. ಮೊಹ್ಮದ್ ಸುಜೀತಾ – ಕೆ.ಜಿ.ಎಫ್ ಎಸ್ಪಿ

17.ಟಿ.ಪಿ. ಶಿವಶಂಕರ್ – ಬೆಂಗಳೂರು ಗ್ರಾಮಾಂತರ ಎಸ್ಪಿ

18. ಎನ್. ವಿಷ್ಣುವರ್ಧನ – ಬೆಂಗಳೂರು ಪೋಲಿಸ್ ಆಡಳಿತ ವಿಭಾಗದ ಡಿಸಿಪಿ

19. ಕಲಾ ಕೃಷ್ಣಮೂರ್ತಿ – ಫೋರೆನ್ಸಿಕ್ ಲ್ಯಾಬ್ ನಿರ್ದೇಶಕಿ

     ಐಎಂಎ ಸೇರಿದಂತೆ ಇತ್ತೀಚೆಗೆ ನಡೆದ ವಂಚನೆ ಪ್ರಕರಣಗಳ ಆರೋಪಿಗಳನ್ನು ಬಂಧಿಸಲು ಅನುಕೂಲವಾಗುವಂತೆ ಸಿಎಂ ಈ ಬದಲಾವಣೆ ಮಾಡಿದ್ದಾರೆ ಎನ್ನಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap