ಧಾರವಾಡ:
ನೌಕರನೊಬ್ಬ ತನ್ನ ಪತ್ನಿ, ಮಗಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಕವಳಿಕಾಯಿ ಚಾಳದ ನಿವಾಸಿ, ಟಾಟಾ ಕಂಪೆನಿ ನೌಕರ ಮೌನೇಶ್ ಪತ್ತಾರ್ ಎಂಬುವವರೇ ಪತ್ನಿ ಅರ್ಪಿತಾ, ಪುತ್ರಿ ಕೃತಿಕಾಗೆ ವಿಷ ಕುಡಿಸಿ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ.
ಇಲ್ಲಿನ ಟಾಟಾ ಮಾರ್ಕೊಪೊಲೋ ಕಂಪೆನಿಯ ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ, ಕಂಪನಿಯಲ್ಲಿ ಕೊರೊನಾ ಹೆಚ್ಚಳವಾದ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎನ್ನಲಾಗಿದೆ.
ಕಂಪನಿ ಮುಚ್ಚಿದ ಹಿನ್ನೆಲೆ ಕೆಲಸ ಕಳೆದುಕೊಳ್ಳುವ ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
