ತುಮಕೂರು :
ಹೈ ಟೆನ್ಷನ್ ವೈಯರ್ ಗೆ ಸಿಲುಕಿದ್ದ ಗಾಳಿಪಟ ತೆಗೆಯಲು ಹೋಗಿ 50 ವರ್ಷದ ವ್ಯಕ್ತಿ ಸಾವನ್ನಪ್ಪಿರುವ ದುರ್ಘಟನೆ ನಗರದ ಸದಾಶಿವನಗರ ಬಳಿ ನಡೆದಿದೆ.
ಅಬ್ಸಲ್(50) ಮೃತ ದುರ್ದೈವಿ. ಈತನ ಮಗ ಆಟವಾಡುವ ವೇಳೆ ಗಾಳಿಪಟ ಹೈ ಟೆನ್ಷನ್ ವೈಯರ್ ಗೆ ಸಿಲುಕಿದೆ. ಇದನ್ನು ತೆಗೆಯಲು ಹೋದ ಅಬ್ಸಲ್ ಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ವೇಳೆ ಮಗನಿಗೂ ಗಾಯವಾಗಿದ್ದು, ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ತಿಲಕ್ ಪಾರ್ಕ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ