ಬೆಂಗಳೂರು:
ಫೇಸ್ ಬುಕ್ ನಲ್ಲಿ ಪರಿಚಿತರಾಗಿ, ನಂತರ ಪ್ರೀತಿಗೆ ಜಾರಿ ಮಧುವೆ ಮಾಡಿಕೊಂಡ ದಂಪತಿಯ ಜೀವನ ಫೇಸ್ ಬುಕ್ ನಿಂದಲೇ ಅಂತ್ಯಕಂಡಿದೆ.
ಗಂಡನೇ ತನ್ನ ಹೆಂಡತಿ ಹಾಗೂ ಮಗವನ್ನು ಕೊಲೆ ಮಾಡಿರುವ ವಿಚಿತ್ರ ಘಟನೆ ಇದಾಗಿದ್ದು, ಪರಸ್ಪರ ಪ್ರೀತಿಸಿ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ದಂಪತಿ ಇಂದು ದೂರಾಗಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಎಸ್‌ಕೆ ರಾಜು ಹಾಗೂ ಸುಷ್ಮಾ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದರು, ಕ್ರಮೇಣವಾಗಿ ಪ್ರೀತಿಗೆ ಜಾರಿದ್ದರು. ಸುಷ್ಮಾ ಗರ್ಭಿಣಿ ಎಂದು ತಿಳಿದ ಬಳಿಕ ಆರು ತಿಂಗಳ ಹಿಂದೆ ಮದುವೆಯಾಗಿದ್ದರು.
ಮದುವೆಯಾದ ಬಳಿಕವೂ ಸುಷ್ಮಾಳ ಅತಿಯಾದ ಫೇಸ್‌ಬುಕ್ ಹುಚ್ಚಿಗೆ ಬೇಸತ್ತ ರಾಜು ಸುಷ್ಮಾ ಮೇಲೆ ಪದೇ ಪದೇ ರೇಗಾಡುತ್ತಿದ್ದ. ಇದೇ ಕಾರಣಕ್ಕೆ ಇವರಿಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಇದರಿಂದ ರೋಸಿ ಹೋಗಿದ್ದ ರಾಜು ಜನವರಿ 20 ರಂದು ಪತ್ನಿ ಸುಷ್ಮಾ( 25 ) ಹಾಗೂ ಮೂರು ತಿಂಗಳ ಗಂಡು ಮಗುವನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಬಿಡದಿ ಬಳಿಯ ಹೆಜ್ಜಾಲ- ಮುತ್ತುರಾಯನಪುರ ರಸ್ತೆಯ ಕುಂಬಳಗೂಡು ಅರಣ್ಯ ಪ್ರದೇಶದ ನೀಲಗಿರಿ ತೋಪಿನತ್ತ ಪ್ರಯಾಣ ಬೆಳೆಸಿದ್ದ. ಅಲ್ಲಿಯೇ ಕಲ್ಲಿನಲ್ಲಿ ಜಜ್ಜಿ ಕೊಲೆ ಮಾಡಿ ಆಕೆಯ ದೇಹವನ್ನು ಸಂಪೂರ್ಣವಾಗಿ ಸುಟ್ಟು ಹಾಕಿ, ನಂತರ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದ.
ಸುಷ್ಮಾ ತಾಯಿ ತನ್ನ ಮಗಳು-ಮೊಮ್ಮಗು ಕಾಣಿಸುತ್ತಿಲ್ಲ ಎಂದು ಅಳಿಯನ ಮೇಲೆ ಸಂದೇಹವನ್ನು ವ್ಯಕ್ತಪಡಿಸಿ ದೂರು ದಾಖಲಿಸಿದ್ದರು. ಆ ದೂರು ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದರು. ಸದ್ಯ ಆರೋಪಿ ರಾಜು ಹೆಂಡತಿ, ಮಗುವನ್ನು ಕೊಲೆ ಮಾಡಿದ ಬಗ್ಗೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
