ಚಾರ್ಮಾಡಿ ಘಾಟಲ್ಲಿ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ!!

ಮೂಡಿಗೆರೆ :

       ಚಾರ್ಮಾಡಿ ಘಾಟಿಯ ಮಲಯ ಮಾರುತ ಬಳಿ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಕಿಗೆ ಬಂದಿದೆ.

      ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಮೂಲದ ವ್ಯಕ್ತಿಯೋರ್ವ ಮಲಯ ಮಾರುತದ ಬಳಿ ಕಾರ್ ನಿಲ್ಲಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.  ಕಾರಿನಲ್ಲಿ ದೊರೆತ ದಾಖಲೆಗಳ ಪ್ರಕಾರ ಮೃತಪಟ್ಟ ವ್ಯಕ್ತಿಯನ್ನು 44 ವರ್ಷದ ನಾಗರಾಜು ಎಂದು ಗುರುತಿಸಲಾಗಿದೆ. 

     ಮಂಗಳವಾರ ಸಂಜೆಯಿಂದ ಕಾರು ಇಲ್ಲಿದ್ದು, ಬುಧವಾರ ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಕಾರಿನ ಪಕ್ಕ ವಿಷದ ಬಾಟಲಿ ಪತ್ತೆಯಾಗಿದ್ದು, ಡ್ರೈವಿಂಗ್ ಸೀಟಿನಲ್ಲಿ ಕುಳಿತು ವಿಷ ಸೇವಿಸರಬಹುದು ಎಂದು ಅಂದಾಜಿಸಲಾಗಿದೆ.

ಡೆತ್ ನೋಟ್ ಪತ್ತೆ: 

     ಕಾರಿನಲ್ಲಿ ನಾಗರಾಜು ಬರೆದಿದ್ದಾನೆ ಎನ್ನಲಾದ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ಗಿರೀಶ್ ಎಂಬಾತ ನನಗೆ 26 ಸಾವಿರ ರೂಪಾಯಿ ಹಣ ನೀಡಬೇಕಿದ್ದು, ನನ್ನ ಬೈಕ್ ಕೂಡಾ ಆತನಿಗೆ ಕೊಟ್ಟಿದ್ದೇನೆ ಎಂದು ಬರೆದಿದ್ದಾರೆ.

ಅಗಲಿದ ಪತ್ನಿಯ ನೆನಪು:

      ನಾಗರಾಜು ಅವರ ಪತ್ನಿ 20 ದಿನಗಳ ಹಿಂದೆ ಸಾವನ್ನಪ್ಪಿದ್ದರು ಎನ್ನಲಾಗಿದೆ. ” ಪತ್ನಿಯನ್ನು ಕಳೆದುಕೊಂಡ ಮೇಲೆ ನನಗೆ ಜೀವನ ಬೇಸರವಾಗಿದೆ. ಅವಳನ್ನು ಬಿಟ್ಟು ನನಗೆ ಜೀವನವೇ ಇಲ್ಲ. ಹಾಗಾಗಿ ಅವಳ ದಾರಿಗೆ ನಾನು ಸಾಗುವೆ” ಎಂದು ಡೆತ್ ನೋಟ್ ನಲ್ಲಿ ಬರೆದುಕೊಂಡಿದ್ದಾರೆ.

      ಆದರೆ, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅನ್ನೋದಿನ್ನು ಸಾಬೀತಾಗಿಲ್ಲ. ಪ್ರಾಥಮಿಕ ಹಂತವಾಗಿ ಪೊಲೀಸರಿಂದ ಸ್ಥಳ ಪರಿಶೀಲನೆ ನಡೆದಿದ್ದು, ಸದ್ಯಕ್ಕೆ ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ. ಆದರೆ, ಪೊಲೀಸರ ತನಿಖೆಯಿಂದ ಸತ್ಯ ಹೊರಬೀಳಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap