ಮಂಡ್ಯ :
ತನ್ನ ಇಬ್ಬರೂ ಮಕ್ಕಳಿಗೆ ನೇಣು ಬಿಗಿದು ತಾಯಿಯೂ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ
ಜಿಲ್ಲೆಯ ಪಾಂಡವಪುರ ತಾಲೂಕಿನ ಕುಪ್ಪಳ್ಳಿ ಗ್ರಾಮದಲ್ಲಿ ನಡೆದಿದೆ.
ಮಕ್ಕಳಾದ ಗಾನವಿ(6) ಮತ್ತು ಉಲ್ಲಾಸ್ (4) ತಾಯಿ ನಿವೇದಿತಾ(26) ನೇಣಿಗೆ ಶರಣಾಗಿರುವ ದುರ್ದೈವಿಗಳು. ತನ್ನ ಇಬ್ಬರು ಮಕ್ಕಳಿಗೆ ಮೊದಲು ನೇಣುಹಾಕಿದ್ದಾರೆ. ಮಕ್ಕಳು ಸತ್ತಿರುವುದನ್ನು ಖಚಿತಪಡಿಸಿಕೊಂಡ ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
7 ವರ್ಷಗಳ ಹಿಂದೆ ಕೃಷ್ಣೇಗೌಡ ಎಂಬುವವರನ್ನು ನಿವೇದಿತಾ ವಿವಾಹವಾಗಿದ್ದು. ಗಂಡ-ಹೆಂಡತಿಯರಿಬ್ಬರು ಅನ್ಯೂನ್ಯವಾಗಿಯೇ ಸಂಸಾರ ನಡೆಸುತ್ತಿದ್ದರಂತೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಘಟನೆಗೆ ಸಂಬಂಧಿಸಿದಂತೆ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
