ಮಂಗಳೂರು:
ಕೋಳಿ ತ್ಯಾಜ್ಯ ವಿಲೇವಾರಿ ಗುಂಡಿ ನಿರ್ಮಾಣದ ವೇಳೆ ಗುಡ್ಡ ಕುಸಿತದಿಂದ ಮಣ್ಣಿನಡಿಯಲ್ಲಿ ಸಿಲುಕಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅರ್ಲಪದವು ಎಂಬಲ್ಲಿ ಇಂದು ನಡೆದಿದೆ.
ಕಡಮ್ಮಾಜೆ ಹಾಜಿ ಅಬ್ದುಲ್ಲಾ ಎಂಬುವರಿಗೆ ಸೇರಿದ ಕೋಳಿ ಫಾರ್ಮ್ನ ತ್ಯಾಜ್ಯ ವಿಲೇವಾರಿ ಗುಂಡಿ ನಿರ್ಮಾಣದ ಕೆಲಸ ಅರ್ಲಪದವುನಲ್ಲಿ ನಡೆಯುತ್ತಿತ್ತು. ಕೂಲಿ ಕಾರ್ಮಿಕರಾದ ಪಾರ್ಪಳ್ಳ ನಿವಾಸಿಗಳಾದ ಬಾಬು ಮತ್ತು ರವಿ ಕೆಲಸ ಮಾಡುತ್ತಿದ್ದರು. ಜೆಸಿಬಿ ಮೂಲಕ ಹೊಂಡ ತೆಗೆಯುವ ಕಾಮಗಾರಿ ಪ್ರಗತಿಯಲ್ಲಿತ್ತು.
ಈ ವೇಳೆ ಬಾಬು ಮತ್ತು ರವಿ ಹೊಂಡದ ಒಳಗೆ ಬಿದ್ದಿದ್ದು, ಕ್ಷಣಾರ್ಧದಲ್ಲಿ ಮಣ್ಣು ಕುಸಿದಿದೆ. ಕಾರ್ಮಿಕರಿಬ್ಬರೂ ಜೀವಂತ ಸಮಾಧಿಯಾಗಿದ್ದು, ಮೃತದೇಹವನ್ನು ಪುತ್ತೂರು ಅಗ್ನಿಶಾಮಕ ದಳ ಹಾಗೂ ಸಂಪ್ಯ ಪೊಲೀಸರು ಹೊರ ತೆಗೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/03/Mannu-kusitha-dead.jpg)