ಮಂತ್ರಾಲಯ : ಕಳಪೆ ಗಂಧ ಲೇಪನದಿಂದ ಕಪ್ಪಾದ ಬೃಂದಾವನ!

ಮಂತ್ರಾಲಯ :

      ಮಂತ್ರಾಲಯದ ರಾಯರ ಬೃಂದಾವನಕ್ಕೆ ಕಳಪೆ ಗಂಧ ಲೇಪನ ಮಾಡಿದ್ದರಿಂದ ಬೃಂದಾವನ ಕಪ್ಪು ಬಣ್ಣ ಸ್ಥಿತಿಗೆ ಬದಲಾಗಿದೆ ಎನ್ನಲಾಗಿದೆ.

     ಇಂದು  ಅಕ್ಷಯ ತೃತೀಯ ದಿನದಂದು ರಾಯರ ಬೃಂದಾವನಕ್ಕೆ ಗಂಧ ಲೇಪನ ಮಾಡಲು, ಸ್ವಾಮೀಜಿಯವರು ಮಠದಲ್ಲೇ ಗಂಧ ತೇಯ್ದು ಲೇಪನ ಮಾಡದೇ, ಮಾರ್ಕೆಟ್ ನಲ್ಲಿ ಸಿಗುವ ಪೌಡರ್ ಗಂಧವನ್ನು ಲೇಪನ ಮಾಡಿದ್ದರಿಂದ ಬೃಂದಾವನ ಕಪ್ಪಾಗಿದೆ ಎಂದು ಆರೋಪಿಸಲಾಗಿದೆ.

       ತೇಯ್ದ ಗಂಧವನ್ನು ಬಳಸದೇ ಕಳಪೆ ಗುಣಮಟ್ಟದ ಗಂಧ ತರಿಸಿ ಲೇಪನ ಮಾಡಿರುವ ಪೀಠಾದಿಪತಿ ಸಂಪ್ರದಾಯ ಮುರಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ