ಭಾನುವಾರ ಕಂಪ್ಲೀಟ್ ಲಾಕ್’ಡೌನ್ : ಮದುವೆ ಮಾಡಲು ಅನುಮತಿ!!

    ಭಾನುವಾರ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದರಿಂದ ಪೂರ್ವ ನಿಗದಿತ ವಿವಾಹಗಳ ಬಗ್ಗೆ ಎದ್ದಿದ್ದ ಗೊಂದಲಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದೆ.

     ವಾರದಲ್ಲಿ ಎಲ್ಲಾ ದಿನ ಲಾಕ್ ಡೌನ್ ಸಡಿಲಿಕೆ ಮಾಡಿದ್ದು, ಆದರೆ ಭಾನುವಾರದಂದು ಮಾತ್ರ ಜನತಾಕರ್ಪ್ಯೂ ಇರುವ ಕಾರಣ ಜನಸಾಮಾನ್ಯರು ಮನೆಯಿಂದ ಹೊರಗೆ ಬರುವಂತಿಲ್ಲ ಎಂದು ಸರ್ಕಾರ ಈ ಹಿಂದೆ ತಿಳಿಸಿದೆ. ಆದರೆ ಭಾನುವಾರದಂದು ಮದುವೆ ದಿನ ನಿಗದಿಯಾದವರಿಗೆ ಇದರಿಂದ ಆತಂಕ ಶುರುವಾಗಿತ್ತು.

      ಭಾನುವಾರ ವಾಹನ ಸಂಚಾರ ಪೂರ್ಣ ನಿಷೇಧ ಹೇರಲಾಗಿದೆ, ವ್ಯಾಪಾರ-ವಹಿವಾಟಿಗೂ ಅವಕಾಶವಿರಲ್ಲ. ಭಾನುವಾರದಂದು ನಿಗದಿಯಾದ ವಿವಾಹಗಳ ಕತೆ ಏನು ಎಂಬ ಪ್ರಶ್ನೆ ಎದ್ದಿತ್ತು. ಆದರೆ ವಿವಾಹಗಳಿಗೆ ಅವಕಾಶ ನೀಡಲು ಸರ್ಕಾರ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ.

      50 ಜನರಿಗೆ ಸೀಮಿತಗೊಂಡಂತೆ ವಿವಾಹ ನಡೆಸುವ ಷರತ್ತು ಈಗಾಗಲೇ ಜಾರಿ ಇದ್ದು, ಭಾನುವಾರ ನಡೆಯುವ ವಿವಾಹಗಳಿಗೂ ಅದು ಅನ್ವಯವಾಗಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ