ಬಾಕ್ಸಿಂಗ್ : ಸೆಮಿಫೈನಲ್‍ಗೆ ಮೇರಿ ಕೋಮ್, ಪದಕ ಖಚಿತ!

ಉಡಾನ್ ಉಡೆ(ರಷ್ಯಾ):

      ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರು ಇಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ 51 ಕೆ.ಜಿ ವಿಭಾಗದಲ್ಲಿ ಸೆಮಿಫೈನಲ್‍ಗೆ ತಲುಪಿದ್ದಾರೆ. 

      ಗುರುವಾರ ನಡೆದ 51 ಕೆ.ಜಿ ವಿಭಾಗದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಕೊಲಂಬಿಯಾದ ವ್ಯಾಲೆನ್ಸಿಯಾ ವಿಕ್ಟರ್ ವಿರುದ್ಧ 5-0 ಅಂತರದಲ್ಲಿ ಗೆಲ್ಲುವ ಮೂಲಕ ಕನಿಷ್ಟ ಕಂಚಿನ ಪದಕವನ್ನು ಭದ್ರಪಡಿಸಿಕೊಂಡಿದ್ದಾರೆ.

Mary Kom

     ಅ.12ರಂದು ನಡೆಯುವ ಸೆಮಿಫೈನಲ್​ನಲ್ಲಿ ಮೇರಿ ಕೋಮ್ ಟರ್ಕಿಯ ಬುಸೆನಾಜ್​ ಕಕಿರೋಗ್ಲುರನ್ನು ಎದುರಿಸಲಿದ್ದಾರೆ.ಈ ಮೂಲಕ ಅವರ ವೃತ್ತಿ ಜೀವನದ ಎಂಟನೇ ಚಾಂಪಿಯನ್‍ಶಿಪ್‍ನಲ್ಲಿ ಪದಕ ಖಚಿತಪಡಿಸಿಕೊಂಡಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

      

Recent Articles

spot_img

Related Stories

Share via
Copy link
Powered by Social Snap