ಬೆಂಗಳೂರು:
ಮೈಕ್ರೋಸಾಫ್ಟ್ ಕಂಪನಿಯ ವತಿಯಿಂದ ಇಂದು 3 ಆರ್.ಟಿ. ಪಿ.ಸಿ.ಆರ್.ಟಿ ಪರೀಕ್ಷಾ ಯಂತ್ರಗಳನ್ನು ಕೊಡುಗೆ ನೀಡಿಲಾಯಿತು.
ಈ ಸಂಬಂಧ ವರ್ಚುಯಲ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಖಾಸಗಿ ಕಂಪನಿಗಳು ಕೋವಿಡ್ 19 ರ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿರುವುದು ಸ್ವಾಗತಾರ್ಹ. ವೈರಸ್ ನಿಯಂತ್ರಿಸಲು ಸಾರ್ವಜನಿಕರು ಸೇರಿದಂತೆ ಪ್ರತಿ ಯೊಬ್ಬರೂ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸಭೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ, ಮೈಕ್ರೋಸಾಫ್ಟ್ ಕಂಪನಿಯ ಕಾರ್ಪೊರೇಟ್ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಕುಮಾರ್, ಸಿಬ್ಬಂದಿ ಮುಖ್ಯಸ್ಥ ಸಂದೀಪ್ ಶ್ರೀವಾಸ್ತವ್, ಹಣಕಾಸು ವಿಭಾಗದ ನಿರ್ದೇಶಕ ಅಮರೇಶ್ ರಾಮಸ್ವಾಮಿ, ಅರವಿಂದ ಪ್ರಕಾಶ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ