ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್ : ಖರೀದಿ ದರ 2.50ರೂ.ಗೆ ಹೆಚ್ಚಳ

ಬೆಂಗಳೂರು :

       ರಾಜ್ಯ ಸರ್ಕಾರದಿಂದ ಹಾಲು ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಾಲು ಉತ್ಪಾದಕರಿಗೆ ನೀಡುವ ಖರೀದಿ ದರವನ್ನು 2.50 ರೂ.ಹೆಚ್ಚಳ ಮಾಡಲಾಗಿದೆ.

      ಈಗ ಪ್ರತಿ ಲೀಟರ್ ಹಾಲಿಗೆ ರೂ.24.50ರೂ ನೀಡಲಾಗುತ್ತಿದೆ. ಇದೀಗ ರೂ.2.50 ಉತ್ಪಾದನ ದರ ಹೆಚ್ಚಳದ ಬಳಿಕ ರೂ.27 ಹಾಲು ಉತ್ಪಾದಕರಿಗೆ ಸಿಗಲಿದೆ. ಈ ಬದಲಾವಣೆ ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ.

       ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಶಿವಮೊಗ್ಗ ಹಾಲು ಉತ್ಪಾದಕರ ಒಕ್ಕೂಟ(ಶಿಮುಲ್) ವತಿಯಿಂದ ಹಾಲು ಉತ್ಪಾದಕರಿಗೆ ನೀಡುವ ಖರೀದಿ ದರವನ್ನು 2.50 ರೂ.ಹೆಚ್ಚಳ ಮಾಡಲಾಗಿದೆ.

Image result for milk in dairy

       ಕಳೆದ ಎರಡು ತಿಂಗಳ ಹಿಂದೆ 2.50 ರೂ. ಹೆಚ್ಚಳ ಮಾಡಲಾಗಿತ್ತು. ಲಾಭಾಂಶದ ಪ್ರಮಾಣ ಸತತ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಲಾಭವನ್ನು ರೈತರಿಗೆ ವರ್ಗಾಯಿಸಲು ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿದೆ.

       ಹಾಲು ಉತ್ಪಾದಕರ ಖರೀದಿ ದರವನ್ನು ಹೆಚ್ಚಳ ಮಾಡಲಾಗಿದ್ದರೂ, ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ ಎಂದು ಹೇಳಲಾಗಿದೆ. ಒಟ್ಟಾರೆಯಾಗಿ ಶಿಮುಲ್ ಹಾಲು ಉತ್ಪಾದಕರಿಗೆ ರಾಜ್ಯ ಸರ್ಕಾರ ರೂ.2.50 ಉತ್ಪಾದನ ದರ ಹೆಚ್ಚಳ ಮಾಡುವ ಮೂಲಕ, ಗುಡ್ ನ್ಯೂಸ್ ಅನ್ನು ನೀಡಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap