ಸಚಿವ ಸಿ.ಟಿ. ರವಿಗೂ ತಗುಲಿದ ಕೊರೋನಾ ವೈರಸ್!!

ಬೆಂಗಳೂರು:

      ಕನ್ನಡ ಮತ್ತು ಸಂಸ್ರ್ಕತಿ ಇಲಾಖೆ ಸಚಿವ ಸಿ.ಟಿ.ರವಿ ಅವರು ಕೋವಿಡ್ ಟೆಸ್ಟ್ ಮಾಡಿಸಿದ್ದು, ಪರೀಕ್ಷಾ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.

      ಈ ಕುರಿತು ಸ್ವತಃ ಸಿ.ಟಿ ರವಿ ಸ್ಪಷ್ಟನೆ ನೀಡಿದ್ದು, ಥರ್ಡ್ ಅಂಪೈರ್ ಫಲಿತಾಂಶದಲ್ಲಿ ನನಗೆ ಕೊರೊನಾ ಪಾಸಿಟಿವ್ ಇದೆ ಎಂಬುದು ದೃಢವಾಗಿದೆ. ಆದರೆ ಯಾವುದೇ ತೊಂದರೆಗಳ ಲಕ್ಷಣಗಳಿಲ್ಲದೆ ನಾನು ಸಹಜವಾಗಿದ್ದೇನೆ. ಸೂಕ್ತ ಚಿಕಿತ್ಸೆಗಳನ್ನು ಪಡೆಯುತ್ತಾ ನಾನು ಇಲ್ಲಿಂದಲೇ ಕೆಲಸ ಮುಂದುವರಿಸುಲಿದ್ದು, ಆದಷ್ಟು ಬೇಗ ಗುಣಮುಖನಾಗಿ ನಿಮ್ಮೆಲ್ಲರೊಂದಿಗೆ ಕೆಲಸ ಮಾಡುತ್ತೇನೆ ಎಂದಿದ್ದಾರೆ.

      ಸೋಂಕಿತರ ಸಂಪರ್ಕದಲ್ಲಿದ್ದರಿಂದ ಸಿ.ಟಿ ರವಿ ಒಂದು ವಾರದೊಳಗೆ ಎರಡು ಬಾರಿ ಕೊರೊನಾ ಟೆಸ್ಟ್​ ಮಾಡಿಸಿದ್ದರು. ಇದರಲ್ಲಿ ಒಮ್ಮೆ ಪಾಸಿಟಿವ್​ ಹಾಗೂ ಒಮ್ಮೆ ನೆಗೆಟಿವ್​ ಬಂದಿತ್ತು. ಈ ಗೊಂದಲಗಳ ನಿವಾರಣೆಗಾಗಿ, ಮತ್ತೆ ಮೂರನೇ ಬಾರಿ ಪರೀಕ್ಷೆ ಮಾಡಿಸಿಕೊಂಡಿದ್ದು, ಈಗ ಸೋಂಕು ತಗಲಿರುವುದು ದೃಢವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link