ಸಚಿವ ವೆಂಕಟರಮಣಪ್ಪ ಪತ್ನಿ ನಿಧನ

ತುಮಕೂರು

        ರಾಜ್ಯ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವ ಶ್ರೀ ವೆಂಕಟರಮಣಪ್ಪ ರವರ ಧರ್ಮಪತ್ನಿ ಶ್ರೀಮತಿ ಶಾರದಮ್ಮ(65)  ನವರು ಇಂದು ವಿಧಿವಶರಾಗಿದ್ದಾರೆ.   

      ಬೆಂಗಳೂರಿನ  ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ.

       ಇಂದು ಮಧ್ಯಾನ ಅವರು ನಿಧನರಾಗಿದ್ದು, ಇಂದು ಸಂಜೆ ವೇಳೆಗೆ ಅವರ ಸ್ವಗ್ರಾಮ ಪಾವಗಡದ ಹನುಮಂತನಹಳ್ಳಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುವುದು ಎಂದು ತಿಳಿದುಬಂದಿದೆ. 

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ