ಮೈಸೂರು :
ಜಿಲ್ಲಾ ಉಸ್ತುವಾರಿ ಸಚಿವರಿಲ್ಲದೇ ಚಾಲನೆಗೊಂಡ ಗಜ ಪಯಣಕ್ಕೆ ಮೊದಲು ರಾಮದಾಸ್, ಆನಂತರ ಆರ್.ಅಶೋಕ್ ಚಾಲನೆ ನೀಡಿದ್ದು, ಭಿನ್ನಮತಕ್ಕೆ ಸಾಕ್ಷಿಯಾಯಿತು.
ಇಂದಿನಿಂದ ಮೈಸೂರಿಗೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಿಂದ ಗಜ ಪಯಣದ ಮೂಲಕ ಆರಂಭಗೊಂಡಿದೆ. ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯಕ್ಕೆ ಸೇರಿದ ವೀರನಹೊಸಳ್ಳಿಯಲ್ಲಿ ಅರ್ಜುನ ನೇತೃತ್ವದ ಗಜಪಡೆ ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಿದವು.
ಇಂತಹ ಗಜ ಪಯಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಿಲ್ಲದೇ, ಬಿಜೆಪಿ ಶಾಸಕ ರಾಮದಾಸ್, ನೂತನ ಸಚಿವ ಆರ್ ಅಶೋಕ್ ಒಂದೊಂದು ಬಾರಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಗಜ ಪಯಣಕ್ಕೆ ಚಾಲನೆ ನೀಡುವ ವೇಳೆ ಮೊದಲು ರಾಮದಾಸ್ ಗಜ ಪಡೆಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಇದಾದ ಬಳಿಕ ಗಜಪಯಣ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ಸಚಿವ ಆರ್.ಅಶೋಕ್, ವಿ.ಸೋಮಣ್ಣ ಹಾಗೂ ಬಿಜೆಪಿ ಶಾಸಕ ನಿರಂಜನ್ ಮತ್ತೊಮ್ಮೆ ಗಜಪಡೆಗೆ ಪುಷ್ಪಾರ್ಚನೆ ಮಾಡಿದರು. ನಿಗದಿತ ಸಮಯಕ್ಕಿಂತ ತಡವಾಗಿ ಬಂದ ಕಾರಣ ಎರಡನೇ ಬಾರಿಗೆ ಗಜಪಡೆಗೆ ಪೂಜೆ ಸಲ್ಲಿಸಿದರು. ಇದರಿಂದ ಸಚಿವರಿಗಾಗಿ ಗಜಪಯಣದಲ್ಲಿ ಸಂಪ್ರದಾಯ ಮುರಿದಂತೆ ಕಾಣುತ್ತಿದೆ.
ಅಲ್ಲದೇ ನೂತನ ಸಚಿವ ಸಂಪುಟ ರಚನೆಗೊಂಡ ನಂತ್ರ, ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿತ್ತು. ಈ ಸ್ಪೋಟ ಇನ್ನೂ ಮುಂದುವರೆದಿದ್ದು, ಇಂದಿನ ಮೈಸೂರು ದಸರಾ ಗಜ ಪಯಣದಲ್ಲೂ ಬಿಜೆಪಿಯಲ್ಲಿನ ಭಿನ್ನಮತವನ್ನು ಪ್ರಕಟಿಸಿದಂತೆ ಕಂಡುಬಂದಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ