ನಾರಾಯಣ ನೇತ್ರಾಲಯಕ್ಕೆ ಆನಂದ್ ಸಿಂಗ್ ಶಿಫ್ಟ್!!

ಬೆಂಗಳೂರು: 

      ರಾಮನಗರ ಜಿಲ್ಲೆ ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಕಂಪ್ಲಿ ಶಾಸಕ ಗಣೇಶ್‌ರಿಂದ ಹಲ್ಲೆಗೊಳಗಾಗಿದ್ದ ಶೇಷಾದ್ರಿಪುರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೊಸಪೇಟೆ ಶಾಸಕ ಆನಂದ್ ಸಿಂಗ್ ಅವರನ್ನು ಕಣ್ಣಿನ ಚಿಕಿತ್ಸೆಗಾಗಿ ನಾರಾಯಣ ನೇತ್ರಾಲಯಕ್ಕೆ ಶಿಫ್ಟ್ ಮಾಡಲಾಗಿದೆ. 

      ಇಂದು ಬೆಳಗ್ಗೆ 10 ಗಂಟೆಗೆ ಆನಂದ್‍ಸಿಂಗ್‍ ಅವರನ್ನು ಶೇಷಾದ್ರಿಪುರದ ಅಪೊಲೋ ಆಸ್ಪತ್ರೆಯಿಂದ ನಾರಾಯಣ ನೇತ್ರಾಲಯಕ್ಕೆ    ಆಂಬ್ಯುಲೆನ್ಸ್​​ ಮೂಲಕ ಕರೆದೊಯ್ಯಲಾಗಿದ್ದು, ಅಲ್ಲಿ ಕಣ್ಣಿನ ಪರೀಕ್ಷೆ ನಡೆಸಲಾಗುತ್ತದೆ. ಅಗತ್ಯವೆನಿಸಿದರೆ ಶಸ್ತ್ರಚಿಕಿತ್ಸೆ ನಡೆಸುವ ನಿರ್ಧಾರವನ್ನು ವೈದ್ಯರು ಕೈಗೊಳ್ಳಲಿದ್ದಾರೆ.

      ಹಲ್ಲೆ ವೇಳೆ ಕಣ್ಣಿನ ಭಾಗಕ್ಕೆ ತೀವ್ರತರದ ಪೆಟ್ಟು ತಗುಲಿದೆ. ಇದೇ ಕಾರಣಕ್ಕೆ ಅವರ ಕಣ್ಣಿನ ಮೇಲ್ಭಾಗ ಊದಿಕೊಂಡಿತ್ತು. ಹೀಗಾಗಿ ಚಿಕಿತ್ಸೆಗೆಂದು ಅವರನ್ನು ನಾರಾಯಣ ನೇತ್ರಾಲಯಕ್ಕೆ ರವಾನಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ