ಮಂಗಳೂರು :
ಪಿಪಿಇ ಕಿಟ್ ಧರಿಸದೇ ಕಾಂಗ್ರೆಸ್ ಶಾಸಕ ಶಾಸಕ ಯು.ಟಿ. ಖಾದರ್ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟ ವೃದ್ಧರೊಬ್ಬರ ಅಂತ್ಯಸಂಸ್ಕಾರ ನಡೆಸಿದ್ದಾರೆ.
ಕೊರೊನಾ ಸೋಂಕಿನಿಂದ ನಿನ್ನೆ 70 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದರು. ಸಂಜೆ ಮಂಗಳೂರಿನ ಬೋಲಾರ ಮಸೀದಿಯ ಧಫನ್ ಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ.
ಸೋಂಕಿತನ ಅಂತ್ಯಕ್ರಿಯೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಶಾಸಕ ಖಾದರ್ ಕೂಡ ಅಂತ್ಯಸಂಸ್ಕಾರ ಕಾರ್ಯ ಮಾಡಿದ್ದಾರೆ.
ಖಾದರ್ ಅವರು ಮಸೀದಿ ಭೂಮಿಯಲ್ಲಿ ಗುಂಡಿ ತೆಗೆದು ಸ್ವತಃ ಮೃತದೇಹವನ್ನು ಗುಂಡಿಯಲ್ಲಿಟ್ಟು ಮಣ್ಣು ಮುಚ್ಚುವ ಕೆಲಸ ಮಾಡಿದ್ದಾರೆ. ಆದರೆ ಈ ವೇಳೆ ಪಿಪಿಇ ಕಿಟ್ ಧರಿಸದೇ ಅಂತ್ಯಸಂಸ್ಕಾರ ಕಾರ್ಯ ನಡೆಸಿದ್ದಾರೆ.
ಆರೋಗ್ಯ ಸಿಬ್ಬಂದಿಗಳು ಪಿಪಿಇ ಕಿಟ್ ಧರಿಸಿದ್ದರೂ ಕೂಡ ಶಾಸಕರು ಧರಿಸಿರಲಿಲ್ಲ. ನಿಯಮ ಪಾಲಿಸದೆ ಶಾಸಕ ಖಾದರ್ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ. ಇದರಿಂದಾಗಿ, ಶಾಸಕ ಯು.ಟಿ.ಖಾದರ್ ಗೆ ಕೊರೊನಾ ವೈರಸ್ ಭಯವೇ ಇಲ್ವ? ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ